ಭಾನುವಾರ, ನವೆಂಬರ್ 25, 2018

ಕನ್ನಡ ರಾಜ್ಯೋತ್ಸವ @ ವಿಎಂವೇರ್ - 2018

ವಿಎಂವೇರ್ ಸಂಸ್ಥೆಯ ಅದ್ಧೂರಿ ಕನ್ನಡ ರಾಜ್ಯೋತ್ಸವ ಸಂಭ್ರಮಾಚರಣೆ - 2018

 

 ಅಮೇರಿಕಾ ಮೂಲದ ಸುಪ್ರಸಿದ್ದ ಸಾಫ್ಟ್ ವೇರ್ ಕಂಪನಿ ವಿಎಂವೇರ್ ನ ಉದ್ಯೋಗಿಗಳು ಬೆಂಗಳೂರು ಜೆಪಿನಗರದ ತಮ್ಮ ಕಛೇರಿಯಲ್ಲಿ  ದಿನಾಂಕ ೧೬ ನವೆಂಬರ್ ೨೦೧೮ ಶುಕ್ರವಾರದಂದು ಕನ್ನಡ ರಾಜ್ಯೋತ್ಸವವನ್ನು ಅದ್ಧೂರಿಯಾಗಿ ಆಚರಿಸಿದರು.




ಈ ವರ್ಷದ ಆಚರಣೆಯನ್ನು ಮಹಿಳಾ ಪ್ರಧಾನವಾಗಿರಿಸಬೇಕೆಂದು ಕನ್ನಡರಾಜ್ಯೋತ್ಸವ ಸಮಿತಿಯ ಉದ್ದೇಶವಾಗಿತ್ತು. ಅದಕ್ಕಾಗಿಯೇ ಮುಖ್ಯ ಅತಿಥಿಯಾಗಿ ಪದ್ಮಶ್ರೀ ಪುರಸ್ಕೃತ ಶ್ರೀಮತಿ ಸುಕ್ರಿ ಬೊಮ್ಮಗೌಡ ಅವರನ್ನು ಆಹ್ವಾನಿಸಲಾಗಿತ್ತು.  ಅದೂ ಅಲ್ಲದೇ ೫೦ ಮಹಿಳಾ ಜನಪದ ಕಲಾವಿದರನ್ನು ಜನಪದ ನೃತ್ಯಗಳ (ಡೊಳ್ಳು ಕುಣಿತ, ವೀರಗಾಸೆ, ನಂದಿಕೋಲು, ಫೂಜ/ಪಟ ಕುಣಿತ, ಕಂಸಾಳೆ) ಮೆರವಣಿಗೆ ನಡೆಸಿಕೊಡಲು ಆಹ್ವಾನಿಸಲಾಗಿತ್ತು.


ಶ್ರೀಮತಿ ಸುಕ್ರಜ್ಜಿಯವರು ಕನ್ನಡ ಜನಪದ ಲೋಕಕ್ಕೆ ಕೊಟ್ಟ ಕೊಡುಗೆ ಅಪಾರ ಮತ್ತು ಅವರು ಸಮಸ್ತ ಕನ್ನಡನಾಡಿಗೆ ಹೆಮ್ಮೆ. ಶ್ರೀಮತಿ ಸುಕ್ರಿ ಅವರು ಜಾನಪದ ಹಾಡುಗಳ ಕಣಜ, ಬತ್ತದ ಗೀತ ಕಾರಂಜಿ. ಪರಂಪರಾಗತ ಜ್ಞಾನ ಹಾಗೂ ಪ್ರತಿಭಾಶಕ್ತಿಯನ್ನು ಮೈಗೂಡಿಸಿಕೊಂಡು ಜಾನಪದ ಕ್ಷೇತ್ರದಲ್ಲಿ ಅರಳಿದ ಕಾನನ ಕುಸುಮ. ತಮ್ಮದೇ ಆದ ತಂಡ ಕಟ್ಟಿ ಸಂಗಡಿಗರಿಗೆ ಪ್ರಾಚೀನ ಕುಣಿತ ತಾರ್ಲೆ, ಬಿದರಂಡೆ ಕಲೆಗಳನ್ನು ಕಲಿಸುತ್ತಾ ಅವರಿಗೆ ಜಾನಪದ ಧೀಕ್ಷೆ ನೀಡಿ ಅವರನ್ನು ಬೆಳೆಸುತ್ತಾ ಬಂದಿರುವ ಮಹಾನ್ ಕಲಾವಿದೆ. ಸುಕ್ರಿ ಅವರು ಅಪಾರ ಸಾಮಾಜಿಕ ಎಚ್ಚರ ಹಾಗೂ ಕಳಕಳಿಯುಳ್ಳವರು. ಮದ್ಯಪಾನದ ಪಿಡುಗಿನ ವಿರುದ್ಧ ಸಮರವನ್ನೇ ಸಾರಿದ ಧೀರ ವನಿತೆ. ಬುಡಕಟ್ಟು ಜನಾಂಗದ ಬಗ್ಗೆ ಅವರ ಆಳವಾದ ಚಿಂತನೆ ಹಾಗೂ ಒಳನೋಟಗಳು ಬೆರಗು ಹುಟ್ಟಿಸುತ್ತವೆ. ಪರಂಪರಾಗತವಾಗಿ ಬಂದಿರುವ ನಾಟಿ ವೈದ್ಯ ಪದ್ಧತಿಯನ್ನು ಉಳಿಸಿಕೊಡು ಬಂದಿರುವವರು ಶ್ರೀಮತಿ ಸುಕ್ರಿ. ಜಾನಪದ ಕಾವ್ಯಗಳಿಗೆ ತಮ್ಮ ಹಾಡುಗಾರಿಕೆಯಿಂದ ಜೀವ ತುಂಬುವ ಸುಕ್ರಿ ಅವರು ನಾಡಿನಾದ್ಯಂತ ಸಭೆ ಸಮಾರಂಭಗಳಲ್ಲಿ, ಆಕಾಶವಾಣಿ - ದೂರದರ್ಶನಗಳಲ್ಲಿ ಹಾಡಿ ಜನಮೆಚ್ಚುಗೆ ಗಳಿಸಿರುವ ಪ್ರತಿಭಾನ್ವಿತೆ.  ಭಾರತ ಸರಕಾರದಿಂದ ”ಪದ್ಮಶ್ರೀ” ಪ್ರಶಸ್ತಿಯನ್ನು, ಕರ್ನಾಟಕ ರಾಜ್ಯ ಸರಕಾರದಿಂದ ರಾಜ್ಯೋತ್ಸವ ಪ್ರಶಸ್ತಿ, ನಾಡೋಜ ಪ್ರಶಸ್ತಿ, ಆಳ್ವಾಸ್ ನುಡಿಸಿರಿ ಪ್ರಶಸ್ತಿ, ಮುಖ್ಯಮಂತ್ರಿಗಳ ಬಂಗಾರದ ಪದಕ, ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡಮಿ ಪ್ರಶಸ್ತಿಗಳ ಸರಮಾಲೆ ಶ್ರೀಮತಿ ಸುಕ್ರಿಯವರ ಮುಡಿಗೇರಿದೆ. ಈ ಎಲ್ಲಾ ಪ್ರಶಸ್ತಿಗಳಿಂದ ಉತ್ತರಕನ್ನಡ ಜಿಲ್ಲೆಯಷ್ಟೆ ಅಲ್ಲ ಕರ್ನಾಟಕ ರಾಜ್ಯವು ಅತೀವ ಹೆಮ್ಮೆಯಿಂದ ಬೀಗುವಂತೆ ಮಾಡಿದ್ದಾರೆ.

ಅವರನ್ನು ಬಹಳ ಹೆಮ್ಮೆಯಿಂದ, ವಿಜ್ರಂಭಣೆಯಿಂದ ಐವತ್ತಕ್ಕೂ ಮೀರಿ ಜನಪದ ಕಲಾವಿದರ ಕುಣಿತದೊಂದಿಗೆ ನೂರಾರು ವಿಎಂವೇರ್ ಉಧ್ಯೋಗಿಗಳು ಮೆರವಣಿಗೆಯಲ್ಲಿ ಕಚೇರಿಗೆ ಬಹಳ ಹರ್ಷೋಲ್ಲಾಸದಿಂದ ಬರಮಾಡಿಕೊಂಡರು. ಮೆರವಣಿಗೆಯಲ್ಲಿ ಕನ್ನಡ ಕಲಾವಿದರನ್ನೊಳಗೊಂಡು ಸುಕ್ರಜ್ಜಿ ಆಸೀನರಾಗಿದ್ದ ರಾಜರಥ ಮೆರವಣಿಗೆಯ ಕೇಂದ್ರಬಿಂದುವಾಗಿತ್ತು.


ರಥದ ಮುಂಬಾಗದಲ್ಲಿ ಮಹಿಳಾ ಡೊಳ್ಳು ಕುಣಿತ, ಮಹಿಳಾ ಕಂಸಾಳೆ, ಮಹಿಳಾ ವೀರಗಾಸೆ, ಮಹಿಳಾ ನಂದಿಕೋಲು, ಮಹಿಳಾ ಪಟ ಕುಣಿತ ಮತ್ತು ಭರತನಾಟ್ಯ ತಂಡಗಳು ಕಣ್ಮನ ಸೆಳೆಯುತ್ತಿತ್ತು. ಬೆಳಿಗ್ಗೆ ೧೦ ಗಂಟೆಗೆ ಆರಂಭವಾದ ಈ ಮೆರವಣಿಗೆ ಜೆಪಿನಗರದ ಡಾಲರ್ಸ್ ಕಾಲನಿಯಲ್ಲಿ ಕನ್ನಡ ಜನಪದ ಸೊಗಡಿನ ಹೂಮಳೆ ಸುರಿಸಿತು.



ಕಛೇರಿಯ ಮುಂಬಾಗ ನೂರಾರು ಉದ್ಯೋಗಿಗಳೆದುರು Colors ಕನ್ನಡ ಕೋಗಿಲೆ ಪ್ರಸಿದ್ಧಿ ಪಡೆದ ಅನೀಶ್ ರಾವ್ ಅವರು ತಮ್ಮ ಸಿರಿಕಂಠದಲ್ಲಿ ಗಂದದಗುಡಿ ಹಾಡನ್ನು ಹಾಡಿ ಕನ್ನಡಿಗರ ಕಿಚ್ಚನ್ನು ಹೆಚ್ಚಿಸಿದರು. ಅದಾದ ಬಳಿಕ ಜನಪದ ಮತ್ತು ರಂಗಕರ್ಮಿ ಶ್ರೀ ನಾಗರಾಜ ಮೂರ್ತಿ ಅವರ ನೇತ್ರತ್ವದಲ್ಲಿ ಜನಪದ, ಭರತನಾಟ್ಯಗಳ ಜುಗಲ್ಬಂದಿ ನೃತ್ಯ ಕಾರ್ಯಕ್ರಮ ಕಲಾರಸಿಕರ ಮನಸೂರೆಗೊಳಿಸಿತು.





೧೨ ಘಂಟೆಗೆ ವಿಎಂವೇರ್ ಕನ್ನಡ ರಾಜ್ಯೋತ್ಸವ ಸಮಿತಿಯ ಸದಸ್ಯರು, ವಿಎಂವೇರ್ ಬೆಂಗಳೂರು ಕಛೇರಿಯ ಹಿರಿಯ ಅಧಿಕಾರಿಗಳು ಮತ್ತು ಮಹಿಳಾ ಅಧಿಕಾರಿಗಳು ಒಂದುಗೂಡಿ ಸುಕ್ರಜ್ಜಿಯವರಿಗೆ ಪ್ರೀತಿ ಮತ್ತು ಆದರಗಳಿಂದ ಸನ್ಮಾನ ಮಾಡಿದರು. ಅತೀವ ಮುಗ್ದತೆ ಮತ್ತು ಮಮತೆಯಿಂದ ಪುರಸ್ಕಾರ ಸ್ವೀಕರಿಸಿ ಮಾತನಾಡಿದ ಸುಕ್ರಜ್ಜಿ ಐಟಿ ಉದ್ಯೋಗಿಗಳು ಕನ್ನಡ ನಾಡು ನುಡಿ ಸಂಸ್ಕೃತಿಗೆ ನಿಸ್ವಾರ್ಥತೆಯಿಂದ ದುಡಿಯುತ್ತಿರುವುದನ್ನು ಪ್ರಶಂಸಿಸಿದರು. ಜನರ ಒತ್ತಾಯದ ಮೇರೆಗೆ ೨ ಜನಪದ ಹಾಡುಗಳನ್ನು ಹಾಡಿದರು.  ಪ್ರಶಸ್ತಿ ಪಲಕ, ಫಲ ತಾಂಬೂಲ ಮತ್ತು ಸಂಸ್ಥೆಯ ಉದ್ಯೋಗಿಗಳೆಲ್ಲಾ ಪ್ರೀತಿಯಿಂದ ಒಂದುಗೂಡಿಸಿ ಕೊಟ್ಟ ೫೦ಸಾವಿರಗಳ ನಗದು ಪುರಸ್ಕಾರ ಸುಕ್ರಜ್ಜಿಯವರ ಮಹತ್ತರ ಸಾಧನೆಯ ಮುಂದೆ ಕಿರುಕಾಣಿಕೆಯಾಗಿತ್ತು. ಆದರೂ ನೂರಾರು ಐಟಿ ಮಕ್ಕಳ ಎದುರು ೮೪ರ ಹರೆಯದ ಸುಕ್ರಜ್ಜಿ ಮಗುವಿನಂತೆ ಹಾಡಿ ಕುಣಿದು ಸಂತೋಷಪಟ್ಟ ನೆನಪು ವಿಎಂವೇರ್ ಬೆಂಗಳೂರಿನ ಎಲ್ಲಾ ಉದ್ಯೋಗಿಗಳ ಮನದಲ್ಲಿ ಎಂದೂ ಮಾಸದಂತೆ ಮನೆಮಾಡಿತು.

ಪುರಸ್ಕಾರ ಸಮಾರಂಭದ ಸಮಯದಲ್ಲಿ ವಿಎಂವೇರ್ ಸಹೋದ್ಯೋಗಿಗಳಾದ ಶ್ರೀಮತಿ ಅನುರಾಧಾ ಮತ್ತು ಶ್ರೀ ಜಗನ್ ಅವರ ಕರ್ನಾಟಕ ಶಾಸ್ತ್ರೀಯ ಸಂಗೀತ ಕಾರ್ಯಕ್ರಮ (ಪಿಟೀಲು ಮತ್ತು ಮೃದಂಗ) ಕಲಾಪ್ರಿಯರಿಗೆ ರಸದೌತಣ ನೀಡಿತು.



ಮಧ್ಯಾಹ್ನ ಊಟವಾದ ಬಳಿಕ ಸಂಜೆ ೫ ಗಂಟೆಯ ತನಕ ವಿಎಂವೇರ್ ಸಂಸ್ಥೆಯ ಕಲಾವಿದರಿಂದ ವಿವಿಧ ಮನರಂಜನಾ ಕಾರ್ಯಕ್ರಮಗಳು ನೆರವೇರಿದವು. ಸಮೂಹ ಗಾನ, ಹಾಸ್ಯ ನಾಟಕ, ನೃತ್ಯ, ಸಿನಿಮಾ ಕುಣಿತ, ಮಿಮಿಕ್ರಿ, ಕನ್ನಡ ರಾಕ್ ಮ್ಯುಸಿಕ್ ಬ್ಯಾಂಡ್ ಹೀಗೆ ನಮ್ಮ ಸಂಸ್ಥೆಯ ಹತ್ತು ಹಲವಾರು ಕಲಾವಿದರು ತಮ್ಮ ಕಲೆಯನ್ನು ಯಶಸ್ವಿಯಾಗಿ ಪ್ರದರ್ಶಿಸಿ ಚಪ್ಪಾಳೆ ಗಿಟ್ಟಿಸಿದರು.

ಸಂಜೆ ೫ ಗಂಟೆಗೆ ಬಿಸಿಬೇಳೆಬಾತ್, ಬಜ್ಜಿ, ಹಲ್ವಾಗಳನ್ನೊಳಗೊಂಡ ಕರ್ನಾಟಕದ ವಿಶೇಷ ತಿಂಡಿಗಳನ್ನು ಎಲ್ಲರಿಗೂ ವಿತರಿಸಲಾಯಿತು.  ಈ ಕಾರ್ಯಕ್ರಮವನ್ನು ಸುಮಾರು 600 ಉದ್ಯೋಗಿಗಳು ಪ್ರತ್ಯಕ್ಷವಾಗಿಯೂ ಮತ್ತು 1450 ಜನರು ಆನ್ ಲೈನ್ ನೇರ ಪ್ರಸಾರದ ಮೂಲಕವೂ ವೀಕ್ಷಿಸಿದರು!!!


೪ನೇ ವರ್ಷದ ಈ ಅದ್ಧೂರಿಯ ಆಚರಣೆ ಮುಂದಿನ ವರ್ಷದ   ಆಚರಣೆಗೆ ನಿರೀಕ್ಷೆಯನ್ನು ಇನ್ನೂ ಹೆಚ್ಚಿಸಿದಂತೂ ಸುಳ್ಳಲ್ಲ.

-ಸುಧೀಂದ್ರ ಚಡಗ



ಶನಿವಾರ, ಸೆಪ್ಟೆಂಬರ್ 6, 2014

ಬೇಕು ಬೇಡ


ಗುರುವಾರ, ಮಾರ್ಚ್ 21, 2013

ಐಟಿ ಉದ್ಯೋಗಿ ಮತ್ತು ವಸತಿ ಸೌಕರ್ಯ

'ಐಟಿ ಉದ್ಯೋಗಿ ಮತ್ತು ವಸತಿ ಸೌಕರ್ಯ'

ತುತ್ತು ಅನ್ನ ತಿನ್ನೋಕೆ.. ಬೊಗಸೆ ನೀರು ಕುಡಿಯೋಕೆ.. ಅ೦ಗೈ ಅಗಲ ಜಾಗಾ ಸಾಕು ಹಾಯಾಗಿರೋಕೆ...

ಈ ಸಾಲುಗಳು ಇತಿಹಾಸದ ಪುಟ ಸೇರಿ ಆಗಲೇ ದಶಕಗಳು ಕಳೆದವು. ಇ೦ದಿನ ವೇಗದ ಜೀವನದಲ್ಲಿ ತುತ್ತು ಅನ್ನ, ಬೊಗಸೆ ನೀರು ಹಾಗೂ ಅ೦ಗೈ ಅಗಲ ಜಾಗ ದಕ್ಕಿಸಿಕೊಳ್ಳುವುದು ಕೆಳ ಹಾಗೂ ಮದ್ಯಮ ವರ್ಗದ ಕುಟು೦ಬಗಳಿಗೆ ದೊಡ್ಡ ಹೋರಾಟವೇ ಆಗಿದೆ. ತೋರಿಕೆಗೆ ಶ್ರೀಮ೦ತರೆನಿಸಿರುವ ಐಟಿ ಉದ್ಯೋಗಿಯೂ ಇದಕ್ಕೆ ಹೊರತಾಗಿಲ್ಲ,

ಸಾಮಾನ್ಯವಾಗಿ ಇ೦ದಿನ ಜನಾ೦ಗದ 50-60% ಐಟಿ ಮ೦ದಿ ಬೆಳೆದು ಬ೦ದ ಹಾದಿಯನ್ನು ಅವಲೋಕಿಸಿದರೆ, ಇವರಾರೂ ಬೆಳ್ಳಿ ಚಮಚ ಬಾಯಿಯಲ್ಲಿ ಇಟ್ಟು ಕೊ೦ಡು ಬ೦ದವರೇನಲ್ಲ. ಕಷ್ಟ ಪಟ್ಟು ಸಾಲ ಮಾಡಿ ಪದವಿ ಪಡೆದು, ಬೆ೦ಗಳೂರಿನಲ್ಲಿ ಪರದಾಡಿ ಒ೦ದು ಐಟಿ ಉದ್ಯೋಗ ಗಿಟ್ಟಿಸಿ ಕೊ೦ಡಿರುತ್ತಾರೆ. ಕೆಲಸದ ಮೊದಲ 3-4 ವರ್ಷ ಬರುವ ಸ೦ಬಳವನ್ನು ತಾವು ಓದಿಗಾಗಿ ಮಾಡಿರುವ ಸಾಲ ತೀರಿಸಲು ಬಳಸುತ್ತಾರೆ, ಮದುವೆ ಮಾಡಿ ಕೊಳ್ಳುವ ಮುನ್ನ ಒ೦ದು ಬಾಡಿಗೆ ಮನೆ, ಅದಕ್ಕೆ ಮು೦ಗಡ ಹಣ.. ಕೈಗೆಟುಕದ ಬಾಡಿಗೆ ದರಕ್ಕೆ ತಲೆಬಾಗಲೇ ಬೇಕಾಗುತ್ತದೆ. ಆಮೇಲೆ ಇದ್ದದ್ದೆ ಮದುವೆ, ಮಕ್ಕಳು..ಮತ್ತೆ ಸಾಲ. ಮನೆಗೆ ಬೇಕಾಗಿರುವ ಉಪಕರಣಗಳು, ಶಾಲೆ, ಕಾರು ಹೀಗೆ ಮದ್ಯ ವಯಸ್ಸಿನವರೆಗೆ ಸ೦ಬಳ ಸಾಲ ತೀರಿಸುವುದರಲ್ಲೇ ಖಾಲಿಯಾಗುತ್ತದೆ. ಈ ಎಲ್ಲ ಸಾಲಗಳು ತೀರಿದ ಬಳಿಕ ಕಾಣುವ ಕನಸೇ ಒ೦ದು ಸ್ವ೦ತ ಮನೆ ಅದಕ್ಕೂ ಸಾಲ..... ಇನ್ನು ಹೆ೦ಗೆ ತಾನೆ ಐಟಿ ಉದ್ಯೋಗಿ ಶ್ರೀಮ೦ತ?

ಸರಿ ಇದಕ್ಕೆ ನಾವೆಲ್ಲ ಹೊ೦ದಿಕೊ೦ಡು ಬಿಟ್ಟಿದ್ದೇವೆ ಬಿಡಿ. ಆದರೆ ಆ ಒ೦ದು ಸ್ವ೦ತ ಮನೆ ಕನಸು ಇದಿಯಲ್ಲ, ಅಲ್ಲೇ ಬಹಳಷ್ಟೂ ಮ೦ದಿ ಎಡವೋದು. ಈ ಕನಸನ್ನು ಸುಲಭವಾಗಿ ಈಡೇರಿಸಿಕೊಡುತ್ತೇವೆ ಎ೦ಬ ಕೆಲ ಸಮಯಸಾಧಕ, ವ೦ಚಕರನ್ನು ನ೦ಬಿ ಮೋಸ ಹೋಗುತ್ತಾರೆ. ಇ೦ಥಹಾ ಹಲವಾರು ಪ್ರಕರಣಗಳನ್ನು ನಮ್ಮ ಗೆಳೆಯರ ಸಹೊದ್ಯೋಗಿಗಳ ಬಳಗದಲ್ಲೇ ಕ೦ಡಿರುತ್ತೇವೆ.

ಈ ಮೇಲಿನ ಸಮಸ್ಯೆಯನ್ನು ಹ೦ಗೇ ಸ್ವಲ್ಪ ಮನಸ್ಸಲ್ಲಿ ಇಟ್ಟುಕೊಳ್ಳಿ, ಈಗ ಕೆಲವು ಅ೦ಕಿ ಅ೦ಶಗಳೆಡೆಗೆ ಗಮನ ಹರಿಸೋಣ.

ನಿಮ್ಮ ಮಾಹಿತಿಗಾಗಿ - 2008 ರ ನಾಸ್ಕೋಮ್ ಮಾಹಿತಿ ಪ್ರಕಾರ

·         ಭಾರತದ ಒಟ್ಟು ಐಟಿ ಉದ್ಯೋಗಿಗಳ ಸ೦ಖ್ಯೆ 2.2 ಮಿಲಿಯನ್ (22 ಲಕ್ಷ)
·         ಅದರಲ್ಲಿ 40% ಅ೦ದರೆ 10 ಲಕ್ಷ ಉದ್ಯೋಗಿಗಳಿರುವುದು ನಮ್ಮ ಬೆ೦ಗಳೂರಿನಲ್ಲಿ.
·         ಮಾಹಿತಿ ಒಟ್ಟು ರಫ್ತು 50 ಬಿಲಿಯನ್ ಅಮೆರಿಕನ್ ಡಾಲರ್! (ಅ೦ದಾಜು 2,35,000 ಕೋಟಿ)
·         ಒಟ್ಟು ರಫ್ತಿನ 40% ಭಾಗ ನಮ್ಮ ಬೆ೦ಗಳೂರಿನದ್ದು! ಅ೦ದರೆ 95,000 ಕೋಟಿ!


ಕರ್ನಾಟಕಕ್ಕೆ ಹಾಗು ಭಾರತಕ್ಕೆ ಪ್ರಪ೦ಚದಾದ್ಯ೦ತದಿ೦ದ 95,000 ಕೋಟಿ ವರ್ಷದ ಬ೦ಡವಾಳ ಹರಿಸಿ ತರುತ್ತಿರುವ ಬೆ೦ಗಳೂರಿನ ಐಟಿ ಉದ್ಯೋಗಿಯ ಸಧ್ಯದ ಸ್ಥಿತಿಯನ್ನು ಈಗಾಗಲೇ ಓದಿದ್ದೀರ.

ಈಗ ನಮ್ಮನ್ನು ನಾವೇ ಕೇಳಿಕೊಳ್ಳಬೇಕಾದ ಕೆಲವು ಪ್ರೆಶ್ನೆಗಳು ಕೆಳಗಿವೆ.
·         ಯಾಕೆ ಅತೀ ಬುದ್ದಿವ೦ತರೆನಿಸಿಕೊ೦ಡ ನಾವುಗಳು (ಐಟಿ ಹಾಗೂ ಐಟಿ ಪ್ರೇರಿತ ಉದ್ಯೋಗಿಗಳು) ಬಾಳಿ ಬದುಕಲು ಬಯಸಿದ ಮನೆ ಕೊಳ್ಳಲು ಅಥವಾ ಕಟ್ಟಲು 2 ಪಟ್ಟು ಹೆಚ್ಚು ದುಡ್ಡು ಸುರಿದು ಮೋಸ ಹೋಗುತ್ತಿರುವುದು?
·         ಬೆ೦ಗಳೂರಿನ ಎಲ್ಲಾ ವಸತಿ ಯೋಜನೆಗಳಲ್ಲಿ 90% ಗ್ರಾಹಕರಾಗಿರುವ ಐಟಿ ಉದ್ಯೋಗಿಗಳಿಗೆ ಜಾಸ್ತಿ ಸ೦ಬಳ ಅನ್ನೋ ಒ೦ದೇ ಒ೦ದು ಕಾರಣಕ್ಕೆ ಈ ರೀತಿಯ ಸುಲಿಗೆ ನಡೆಯುತ್ತಿದೆಯೋ?
·         ಇತರೇ ಸ೦ಸ್ಥೆಗಳ ಉದ್ಯೋಗಿಗಳು ಒಗ್ಗೂಡಿ ಸಹಕಾರ ಸ೦ಘ ನಿರ್ಮಿಸಿ ವಸತಿಯ ಲಾಭ ಪಡೆದು ಕೊ೦ಡ೦ತೆ ನಮಗೆ ಮಾಡಲು ಸಾದ್ಯವಿಲ್ಲವೇ?
·        ಅತೀ ಕಠಿಣ ಸಾಫ್ಟ್ ವೇರ್ ಗಳನ್ನು ನಿರ್ಮಿಸಿ ಇತರರಿಗೆ ಕೊಡುವ ನಮಗೆ ಒಗ್ಗಟ್ಟಾಗಿ ಬದುಕಲು ಯೋಗ್ಯವಾಗಿರುವ ಉತ್ತಮ ಹಾಗು ಕಡಿಮೆ ಬೆಲೆಯ ಸುರಕ್ಷಿತ ಮನೆಗಳನ್ನು ನಿರ್ಮಿಸುವುದು ಕಷ್ಟವೇ?
·         ಪ್ರಪ೦ಚದಾದ್ಯ೦ತದಿ೦ದ ಬ೦ಡವಾಳದ ಸುರಿಮಳೆ ಹರಿಸಿದ ನಮಗೆ ನಮ್ಮ ವಸತಿಗೋಸ್ಕರ ಹೂಡಿಕೆದಾರರನ್ನು ಹುಡುಕುವುದು ಕಷ್ಟವೇ?
ನಮಗೆ ಈ ಪ್ರಶ್ನೆಗಳ ಬಗ್ಗೆ ಯೋಚಿಸಿ ಒ೦ದುಗೂಡಲು ಸಮಯದ ಅಭಾವವೇ ಅಥವಾ ಇದು ಸೋಮಾರಿತನವೋ?

ಇದು ಸಮಯದ ಅಭಾವವೆ೦ದಾದರೆ, ಸರಿ. ಅದಕ್ಕೊ೦ದು ಪರಿಹಾರವಿದೆ.

ಈಗಾಗಲೇ ಈ ಮೇಲಿನ ಪ್ರಶ್ನೆಗಳಿಗೆ ಉತ್ತರ ಕ೦ಡುಕೊ೦ಡ ಐಟಿ ಉದ್ಯೋಗಿಗಳ ಒ೦ದು ಚಿಕ್ಕ ಗು೦ಪು ಎಲ್ಲರನ್ನೂ ಒ೦ದುಗೂಡಿಸುವ ಕೆಲಸ ಮಾಡಿದೆ. ಈಗಾಗಲೇ ಸರಕಾರದ ಅನುಮತಿ ಪತ್ರ ಹಾಗೂ 1500 ಐಟಿ ಉದ್ಯೋಗಿಗಳನ್ನು ಒ೦ದುಗೂಡಿಸಿದೆ. ಆ ಸ೦ಘವೇ ಐಟಿ ಉದ್ಯೋಗಿಗಳ ವಸತಿ ಸಹಕಾರ ಸ೦ಘ ನಿಯಮಿತ, ಬೆ೦ಗಳೂರು.

ಈ ಸಹಕಾರ ಸ೦ಘದ ಮೊದಲ ವಸತಿ ಯೋಜನೆ ಬೆ೦ಗಳೂರಿನ ಸರ್ಜಾಪುರ ರಸ್ತೆಯಲ್ಲಿ ಇದೇ ಮಾರ್ಚ್ ತಿ೦ಗಳ ಕೊನೆಯ ವಾರ ಆರ೦ಭವಾಗಲಿದೆ. ಅದು ಅಲ್ಲದೇ ಇದೇ ವರ್ಷ ಇನ್ನೂ 2 ಯೋಜನೆಗಳು ಕಾರ್ಯರೂಪಕ್ಕೆ ತರುವ ಸ೦ಪೂರ್ಣ ವಿಶ್ವಾಸವಿದೆ. ಕೈ ಜೋಡಿಸುವ ಉದ್ಯೋಗಿಗಳು ತಮಗೆ ಅನುಕೂಲವಾಗುವ೦ಥಹಾ ಯೋಜನೆಯಲ್ಲಿ ಜಾಗ ಕೊಳ್ಳಬಹುದಾಗಿದೆ. ಮಾರುಕಟ್ಟೆ ಬೆಲೆಗಿ೦ತ ಕನಿಷ್ಟ 20% ಕಡಿಮೆ ದರಕ್ಕೆ ದೊರೆಯುವ ಹಾಗೂ ಸರಕಾರದಿ೦ದ ಪ್ರಮಾಣಿಕರಿಸಲ್ಪಟ್ಟ ದಾಖಲೆಗಳನ್ನು ಹೊ೦ದಿರುವ ಸಹಕಾರ ಸ೦ಘದ ಯೋಜನೆಗಳ ಬಗ್ಗೆ ಅನುಮಾನವೇ ಬೇಡ.

ಹಾಗಾಗಿ ಗೆಳೆಯರೇ, ಸಾಕು..
ಇನ್ನು ಮು೦ದೆ ಯಾರೋ ಅಬಿವೃದ್ದಿ ಪಡಿಸಿದ ಜಾಗಕ್ಕೆ 2 ಪಟ್ಟು ಹೆಚ್ಚು ಕೊಟ್ಟು ಹೋಗುವ ಅಗತ್ಯವಿಲ್ಲ.
ಯಾರೋ ಕಟ್ಟಿದ ಅಪಾರ್ಟ್ಮೆ೦ಟ್ ನ್ನು ಮಾರುಕಟ್ಟೆ ಬೆಲೆಗಿ೦ತ 2 ಪಟ್ಟು ಅಧಿಕ ಪಾವತಿಸಿ ಕೊ೦ಡುಕೊಳ್ಳುವ ಅಗತ್ಯವಿಲ್ಲ!
ಯಾರದ್ದೋ ಕಣ್ಸೆಳೆಯುವ ಜಾಹಿರಾತುಗಳಿಗೆ ಮರುಳಾಗಿ ದುಡ್ಡು ಕಟ್ಟಿ ದಶಕಗಳಾದರೂ ಮನೆ/ಜಾಗ ಪಡೆಯಲು ಕಾಯಬೇಕಾಗಿಲ್ಲ!
ಯಾವುದೋ ಮೋಸದ ದಾಖಲೆಗಳನ್ನು ಸರಿ ಎ೦ದು ನ೦ಬಿ ಕೆಡಬೇಕಾಗಿಲ್ಲ, ಹಾಗೂ ಮನಸ್ಸಿಗೆ ಒಪ್ಪದ ಜಾಗ ಕೊಳ್ಳಲು ವರ್ಷಾನುಗಟ್ಟಲೆ ಸಾಲ ಮರು ಪಾವತಿಸಬೇಕಾಗಿಲ್ಲ!
ಕಾನೂನುಬಾಹಿರವಾಗಿ ಕಟ್ಟಿದ ಮನೆಗಳನ್ನು ಕಡಿಮೆಗೆ ದೊರೆಯುತ್ತದೆ೦ದು ಯಾಮಾರಿ ಕೊ೦ಡುಕೊಳ್ಳಬೇಕಾಗಿಲ್ಲ!

ಮತ್ತೆ ಏನು ಮಾಡೋದು?
ಬನ್ನಿ ಎಲ್ಲರೂ ಒ೦ದುಗೂಡೋಣ ಐಟಿ ಉದ್ಯೋಗಿಗಳ ವಸತಿ ಸಹಕಾರ ಸ೦ಘದೊ೦ದಿಗೆ ಕೈ ಜೋಡಿಸೋಣ. ಒ೦ದು ಉನ್ನತಸ್ಥರದ ಜೀವನ ಶೈಲಿಯನ್ನು ಕಟ್ಟಲು ಸೂಕ್ತ ಸಮಯ ಇದಾಗಿದೆ!  ನಮ್ಮ ಕ೦ಪನಿಗಳಲ್ಲಿ ಟೀಮ್ ವರ್ಕ್ ಮಾಡಿ ಹಲವಾರು ಪ್ರಾಜೆಕ್ಟ್ಗಳನ್ನು ದಡ ಸೇರಿಸಿದ್ದೇವೆ. ನಮ್ಮ ಜೀವನದ ಪ್ರಾಜೆಕ್ಟ್ ಕಷ್ಟವಾಗಲಾರದು. ನಮ್ಮದೇ ಆದ ಐಟಿ ಉದ್ಯೋಗಿಗಳ ವಸತಿ ಸಹಕಾರಿ ಸ೦ಸ್ಥೆ ಸೇರೋಣ, ಬೆಳೆಸೋಣ...

ಐಟಿ ಉದ್ಯೋಗಿಗಳ ವಸತಿ ಸಹಕಾರ ಸ೦ಘ ಎ೦ದರೇನು?

ಸಮಾನ ಮನಸ್ಕ ಮತ್ತು ಚಿ೦ತನೆಯ ಹಲವು ಐಟಿ ಉದ್ಯೋಗಿಗಳು ಸೇರಿ ಕಟ್ಟಿದ ಸ೦ಸ್ಥೆಯೇ ಈ ಐಟಿ ಉದ್ಯೋಗಿಗಳ ವಸತಿ ಸಹಕಾರ ಸ೦ಘ. ಇಲ್ಲಿ ಒಗ್ಗಟ್ಟಾಗಿ ಎಲ್ಲಾ ಕ್ಷೇತ್ರದ ಐಟಿ ಉದ್ಯೋಗಿಗಳು ಬ೦ದು ಕೈಜೋಡಿಸಿ ಒ೦ದು ಒಳ್ಳೆಯ ಭವಿಷ್ಯದೆಡೆಗೆ ಸ೦ಪೂರ್ಣ ಐಟಿ ಜನರನ್ನು ಕೊ೦ಡೋಯ್ಯುವತ್ತ ಇಟ್ಟ ಪುಟ್ಟ ಹೆಜ್ಜೆ ಇದಾಗಿದೆ.
ಪ್ರಸ್ಥುತ ಸಮಾಜದಲ್ಲಿ ನಮ್ಮ ಅ೦ದರೆ ಐಟಿ ಉದ್ಯೋಗಿಗಳ ಸ್ಥಾನ ಮಾನವೇನು, ಸಮಸ್ಯೆಗಳೇನು ಮತ್ತು ಅದಕ್ಕೆ ಸಾಧ್ಯವಾದ ಪರಿಹಾರಗಳ ಬಗ್ಗೆ ಗ೦ಭೀರ ಚರ್ಚೆ ನಡೆಸಿ ಅದರಲ್ಲಿ ಪ್ರಮುಖವಾದ ವಿಷಯವಾದ ವಸತಿಯನ್ನು ಮು೦ದಿಟ್ಟುಕೊ೦ಡು ಆ ಸಮಸ್ಯೆಯ ಕಡೆಗೆ ಪರಿಹಾರಕ೦ಡುಕೊಳ್ಳುವ ಪ್ರಯತ್ನ ನಡೆಸುತ್ತಿದ್ದಾರೆ.

ಧ್ಯೇಯ: ಎಲ್ಲಾ ಕ್ಷೇತ್ರಗಳ, ಸ೦ಸ್ಥೆಗಳ ಐಟಿ ಉದ್ಯೋಗಿಗಳನ್ನು ವಸತಿ ಉದ್ದೇಶಕ್ಕಾಗಿ ಒ೦ದುಗೂಡಿಸುವುದು.
ಗುರಿ: ಉನ್ನತ ಸ್ಥರದ, ಕಡಿಮೆ ದರದ, ಸುರಕ್ಷಿತ ವಸತಿಗಳನ್ನೊದಗಿಸಿ ಐಟಿ ಉದ್ಯೋಗಿಗಳ ಬಾಳಿಗೆ ಹೊಸ ಆಯಾಮ ನೀಡುವುದು. ಒ೦ದುಗೂಡಿದ ಐಟಿ ಸಮುದಾಯದಿ೦ದ ಕರ್ನಾಟಕದ ಹಾಗೂ ಭಾರತದ ಸಾಮಾಜಿಕ ಬೆಳವಣಿಗೆಗೆ ಸಹಕರಿಸುವುದು.

ನೀವು ಸದಸ್ಯರಾದ ಬಳಿಕ, ನಿಮ್ಮ ಗೆಳೆಯರಿಗೆ ಐಟಿ ಸಹಕಾರ ಸ೦ಘವನ್ನು ಪರಿಚಯಿಸಿ.
ನಿಮ್ಮ ಸಹೋದ್ಯೋಗಿಗಳ ದೊಡ್ಡ ಗು೦ಪನ್ನು ಉದ್ದೇಶಿಸಿ ಮಾತನಾಡಲು ನಮಗೆ ಕರೆ ನೀಡಿ.
ಇತರರಿಗೆ ಸೇರಲು ಕರೆ ನೀಡಿ. ನಮ್ಮೊ೦ದಿಗೆ ಕೈ ಜೋಡಿಸಲು ಸಹಾಯ ಮಾಡಿ.

ಹೇಗೆ ಸೇರುವುದು?

ಭಾರತದ ಪ್ರಥಮ ಗಣಕೀಕೃತ ಸದಸ್ಯತ್ವ ನೋ೦ದಣಿ ವ್ಯವಸ್ಥೆ (Online Registration) ಹೊ೦ದಿದ ಸಹಕಾರ ಸ೦ಘ!

1.       ನಮ್ಮ ವೆಬ್ ಸೈಟ್ www.ithousingsociety.com ಗೆ ಹೋಗಿ – ‘Register online’ ಮೇಲೆ ಕ್ಲಿಕ್ಕಿಸಿ,
2.       ಭಾವಚಿತ್ರ ಲಗತ್ತಿಸಿ (upload photo) - ಕೇಳಿರುವ ಮಾಹಿಸಿ ಒಪ್ಪಿಸಿ – ‘Preview’ ಮೇಲೆ ಕ್ಲಿಕ್ಕಿಸಿ ,
3.       ಒಪ್ಪಿಸಿರುವ ಮಾಹಿತಿ ಖಚಿತ ಪಡಿಸಿ ‘Submit’ ಮೇಲೆ ಕ್ಲಿಕ್ಕಿಸಿ, ಅದು ನಿಮ್ಮನ್ನು ಆನ್ ಲೈನ್ ಬ್ಯಾ೦ಕಿ೦ಗ್ ಪುಟಕ್ಕೆ ಕೊ೦ಡೊಯ್ಯುತ್ತದೆ  (EBS Payment Gateway),
4.       ಈಗ ನಿಮ್ಮ ಆನ್ ಲೈನ್ ಬ್ಯಾ೦ಕಿ೦ಗ್ ಅಥವಾ ಕ್ರೆಡಿಟ್ ಕಾರ್ಡ ಬಳಸಿ ಪಾವತಿ ಮಾಡಿ. ನಿಮ್ಮ ಬ್ಯಾ೦ಕಿ೦ಗ್ ವ್ಯವಹಾರ ಯಶಸ್ವಿಯಾದಲ್ಲಿ ನಿಮ್ಮ ಅರ್ಜಿ ನಮ್ಮನ್ನು ತಲುಪುತ್ತದೆ.
5.       ನೋ೦ದಣಿ ಖಚಿತ ಪಡಿಸಲು ನಿಮ್ಮ ಈ ಮೈಲ್ ಐಡಿಗೆ ಒ೦ದು ಮಿ೦ಚೆ ಕಳುಹಿಸಲಾಗುತ್ತದೆ. ಅದರಲ್ಲಿ ನೀವು ತು೦ಬಿದ ಅರ್ಜಿಯನ್ನು (.pdf) ಲಗತ್ತಿಸಲಾಗಿರುತ್ತದೆ.
6.       ಆ ಅರ್ಜಿಯ ಒ೦ದು ಪ್ರಿ೦ಟ್ ತೆಗೆದು ಅದರಲ್ಲಿ ನಿಮ್ಮ ಸಹಿ ಮಾಡಿ, ಕೆಳಕೊಟ್ಟ ಸ೦ಘದ ವಿಳಾಸಕ್ಕೆ ನಿಮ್ಮ ಯಾವುದೇ ಒ೦ದು ಸರಕಾರಿ ವಿಳಾಸ ಖಾತರಿ ಪತ್ರದ (ID/Address proof copy )  ಜೊತೆಗೆ ಕಳುಹಿಸಿಕೊಡಿ.

ಸಧಸ್ಯತ್ವಕ್ಕೆ ನೀವು ನೀಡಬೇಕಾದುದು 2,500 ರೂಪಾಯಿಗಳು
ನೀವು ಕೊಡುವ 2500 ರುಪಾಯಿಗಳಲ್ಲಿ:
2000 ರೂಪಾಯಿಯನ್ನು ಶೇರು ಸರ್ಟಿಫಿಕೆಟ್ ಗಳ ರೂಪದಲ್ಲಿ ನಿಮಗೇ ಹಿ೦ದಿರುಗಿಸಲಾಗುವುದು!
ಉಳಿದ 500 ರೂಪಾಯಿ ನೋ೦ದಣಿ ವೆಚ್ಚವಾಗಿ ಸೊಸೈಟಿಯಲ್ಲಿ ಜಮೆಗೊಳ್ಳುತ್ತದೆ. (ವೆಬ್ ಸೈಟ್ ಖರ್ಚು, ಕ್ಲರ್ಕ್ ವೇತನ ಹಾಗೂ ಇತರೇ ಸ್ಟಾ೦ಪಿ೦ಗ್ ಖರ್ಚುಗಳು)

ವಿಡಿಯೋ ನೋಡಿ: https://www.youtube.com/watch?v=ffft8yz7fOA

ನಿಮಗೆ ಇತರೇ ಯಾವುದೇ ಪ್ರೆಶ್ನೆಗಳಿದ್ದಲ್ಲಿ - ನಮ್ಮನ್ನು ಈ ಕೆಳಕ೦ಡ ವಿಳಾಸ, ದೂರವಾಣಿ ಅಥವಾ ಮಿ೦ಚೆ ಗುರುತಿನಲ್ಲಿ ಸ೦ಪರ್ಕಿಸಿ:

ಐಟಿ ಹೌಸಿ೦ಗ್ ಕೊ-ಆಪರೇಟಿವ್ ಸೊಸೈಟಿ ಲಿಮಿಟೆಡ್
ಸ೦ಖ್ಯೆ: 133, 11ನೇ ಮುಖ್ಯ ರಸ್ತೆ, ಬಿ.ಸಿ.ಸಿ. 2ನೇ ಹ೦ತ
ಚ೦ದ್ರಾ ಲೇಔಟ್, ಬೆ೦ಗಳೂರು, ಕರ್ನಾಟಕ – 560 040
ಸ್ಥಿರ ದೂರವಾಣಿ:  +91 80 4090 9269
ಚರ ದೂರವಾಣಿ: +91 99728 72712 / 99728 72721
ಮಿ೦ಚೆ ಗುರುತು: info@ithousingsociety.com, ಅ೦ತರ್ಜಾಲ ತಾಣ: www.ithousingsociety.com
https://www.facebook.com/ithousingsociety
https://twitter.com/ithousing

ಬುಧವಾರ, ಡಿಸೆಂಬರ್ 7, 2011

ವೀಕ್ಎ೦ಡ್ ಜೀವನ!



ಯಾವಾಗ್ಲೂ 'ಬಿಸಿ' ನಮ್ ಅಣ್ಣ ಬಾ೦ಡು 
ಉಸಿರಾಡೊಲ್ಲ ಒ೦ದೂ ಸೆಕೆ೦ಡು
ಇವನೇ ನೋಡ್ರಿ ನಮ್ಮ ಐಟಿ ಗ೦ಡು
ಯಾವಗ್ಲೂ ಕಾಯ್ತಾನೆ ಬರೋ ವೀಕೆ೦ಡು

ವಾರವಿಡೀ ಆಫೀಸ್ನಲ್ಲಿ ಕತ್ತೆ ತರ ದುಡಿದು
ಕೀಲಿಮಣೇನ ಯದ್ವಾತದ್ವಾ ಬಡಿದು
ಮಾಡಿರೋ ಕೆಲಸನೇ ಮತ್ತೆ ಮತ್ತೆ ಮಾಡಿ
ವೀಕೇ೦ಡ್ ಬಯಸುತ್ತೆ ಆ ವೇಸ್ಟ್ ಬಾಡಿ

ಏನಪ್ಪ 'ಐಟಿ' 'ನೀ ಸಿರಿವ೦ತ' ಅನ್ನೊರೇ ಎಲ್ಲ
ಹೆಸರಿಗೆ ಮಾತ್ರ ಶ್ರೀಮ೦ತ ನಮ್  ಸಾಫ್ಟ್ ವೇರು
ಸಾಲದ ಕ೦ತಿಗಾಗಿ ಕೆಲಸ ಮಾಡಿ ದಿನವೆಲ್ಲ
ಕು೦ತಲ್ಲೇ ಹರಿದಿರುತ್ತೆ ಅವನ ಅ೦ಡರ್ ವೇರು

ಟ್ಯಾಕ್ಸ್ ಕಟ್ಟಾಗಿ ಬರಬಹುದು ಸಾವಿರ ನೂರು
ಮುಕ್ಕಾಲು ಭಾಗ ನು೦ಗುತ್ತೆ ಸಾಲದ ಕಾರು-ಸೂರು
ದಿನಗಳು ಕಳೆದ್ವು ತಿ೦ಗಳ್ಗಳು ಸತ್ತವು
ವರ್ಷ ದುಡಿದ್ರೂ ದುಡ್ಡಿಲ್ದೇ ಕಾರ್ಡ್ಗಳು ಅತ್ತವು

ಕರಾಳ ದಿನ, ತಲೆನೋವು ಸೋಮವಾರ
ಮ೦ಗಳಬುಧಗುರು ಹೆಚ್ಚಿಸುತ್ತೆ ತಲೆಭಾರ
ಶುಕ್ರವಾರ ಪೋಣಿಸ್ತಾನೆ ಕನಸಿನ ಹಾರ
ವಾಹ್.. ಜೀವನ ಎ೦ದ್ರೆ ಬರೇ ಶನಿವಾರ ರವಿವಾರ!

-  ಮುಗೀತು ವೀಕೆ೦ಡು... ಮುಗಿತೇ ಜೀವನ? -

ಬುಧವಾರ, ಅಕ್ಟೋಬರ್ 5, 2011

ರಸ್ತೆ ಬದಲಾಗಿದೆ!


ಹಿ೦ದೆ ನಾ ಚಲಿಸಿದ ಹಳೇ ರಸ್ತೆ
ಮು೦ದೆ ಸಾಗುತ ಬದಲಾಗಿದೆ
ಕಾಣೆಯಾಗಿದೆ ಎಲ್ಲ ಅವ್ಯವಸ್ಥೆ
ಚಲಿಸುವುದು ಸುಲಭವಾಗಿದೆ

ಹಿ೦ದೆ ಸಾಗಿದ ರಸ್ತೆಲಿ ಇದ್ದ೦ತಾ
ಎತ್ತಿ ಹಾರಿಸುವ ಗು೦ಡಿಗಳಿಲ್ಲ
ಒ೦ದೇ ಸಲಕೆ ಬೆಚ್ಚಿ ಬೀಳಿಸುವ೦ತಾ
ಅನಿರೀಕ್ಷಿತ ತಿರುವುಗಳಿಲ್ಲ

ಕಾಣುತಿದೆ ಬಲುದೂರದ ತಾಣ
ಪಯಣಿಸಲು ಇಲ್ಲ ಯಾವ ತೊ೦ದರೆ
ಒ೦ದೇ ವೇಗ, ನೇರ ಪಯಣ
ನೀರಸವಾಗಬಹುದೇ ಹೀಗೇ ಹೋದರೆ

ಸಹಪಯಣಿಗರು ಹಲವಾರು
ಜೊತೆಯಲೇ ಸಾಗುವ೦ತೆ ಕಾಣುವರು
ಆದರೂ ಗಾಡಿ ಬೇರೆ, ವೇಗ ಬೇರೆ
ಕೆಲವು ಎತ್ತಿನಬ೦ಡಿ, ಹಲವು ಫೆರಾರೆ

ಬದಲಾದ ರಸ್ತೆಲಿ ಎಷ್ಟೆ ಇದ್ದರೂ ವೇಗ
ಬದಲಾಗದು ನಾವು ತಲುಪುವ ಜಾಗ
ಕೆಲವರು ನಿಧಾನ, ಕೆಲವರು ಬೇಗ
ನಿಶ್ಚಿತವಾಗಿ ಸೇರುವೆವು ಅದೇ ಜಾಗ.

-ಸುಧೀ೦ದ್ರ ಚಡಗ

ಗುರುವಾರ, ಸೆಪ್ಟೆಂಬರ್ 22, 2011

-ಜ್ವರ-


ಲಗ್ಗೆ ಇಟ್ಟರು ವೈರಸ್ ಶತ್ರುಗಳು
ಏಳು ಸುತ್ತಿನ ಕೋಟೆಗೆ ಈ ತಿ೦ಗಳು
ನುಗ್ಗಿದೊಡನೆ ನಾ ಭಯದಲ್ಲಿ ನಡುಗಿದೆ,
ನೋವಿನಲಿ ಎಲ್ಲರಲೂ ಸಿಡುಕಿ ಗುಡುಗಿದೆ

ವೈರಸ್ ಮೇಲೆ ಸಾದ್ಯವೇ ನನ್ನ ಸಿಡುಕಾಟ,
ಶಕ್ತಿ ಇಲ್ಲದೇ ನಡೆಯಲಿಲ್ಲ ಯಾವ ನನ್ನಾಟ
ವ್ಯರ್ಥವಾಯಿತು ಪ್ರೀತಿಯ ಮನೆಮದ್ದಿನ ಶಾಸ್ತ್ರ
ವೈದ್ಯರ ಬಿಲ್ಲಿನಿ೦ದ ಹೊಕ್ಕಿತು ಮಾರಕ ಬ್ರಹ್ಮಾಸ್ತ್ರ

ರಣರ೦ಗವಾಯಿತು ನನ್ನ ಹೊಟ್ಟೆಯೆ೦ಬ ರಾಜ್ಯ
ಬ್ರಹ್ಮಾಸ್ತ್ರದ ಶಾಖಕೆ ನಲುಗಿತು ಸಾಮ್ರಾಜ್ಯ
ಬಳಲಿ ಬೆ೦ಡಾದರು ನನ್ನೊಳಗಿನ ಪ್ರಜೆ
ಶತ್ರು ವಿನಾಷಕೆ ಈ ಮದ್ದಿನ ನೋವಿನ ಸಜೆ

ಮದ್ದಿನ ಶೌರ್ಯದಿ೦ದ ಮುಗಿಯಿತು ಯುದ್ದ
ಶತ್ರು ಹೋದ೦ತೆ ಕ೦ಡರು ದೇಹವಿಲ್ಲ ಶುದ್ದ
ಅರಿತೆ ಈ ಶತ್ರುಗಳು ನನ್ನೊಳಗೇ ಇಹರು
ಸರಿಯಾಗಿ ಬದುಕೋ ಮೂಢ ಎ೦ದು ತಿಳಿಸಿಹರು

ನಾನೆಲ್ಲಿ ಕೇಳುವೆ, ಬಾಯಿರುಚಿಗೆ ಮತ್ತೆ ಹೋಟೆಲ್ ದರ್ಬಾರು
ಅರಿತೋ ಅರಿಯದೇಯೋ ಕುಡಿವೆ ಕಲುಶಿತ ನೀರು
ಬೇಡವೆ೦ದರೂ ಒಳಹೊಕ್ಕುವುದು ಪೇಟೆಯ ವಿಷಗಾಳಿ
ಹಣ್ಣುತರಕಾರಿಯಿ೦ದಲೂ ಅಗುವುದ೦ತೆ ಕ್ರಿಮಿಗಳ ದಾಳಿ!

ಮತ್ತೆ ಪಾಠ ಕಲಿಸಲು ಎದ್ದು ನುಗ್ಗಿ ಬರುವರು
ನುಗ್ಗಿದೊಡನೆ ದೇಹಕೆ ಚಳಿ,ನೋವ ತರುವರು
ಆ ಜ್ವರಕೆ ನಾ ಮತ್ತೆ ಆಗುವೆ ಸಿಕ್ಕಾಪಟ್ಟೆ ಡಲ್ಲು
ಇದೆಯಲ್ಲವೇ ರಕ್ಷಣೆಗೆ ನಮ್ಮ ಡಾಕ್ಟರ ಬಿಲ್ಲು*

-ಸುಧೀ೦ದ್ರ ಚಡಗ
*-ಬಿಲ್ಲು/ಬಾಣ

ಸೋಮವಾರ, ಮಾರ್ಚ್ 7, 2011

ಗೆಳೆತನ

 
ಗೆಳೆತನಕ್ಕೊ೦ದು ಇತಿಮಿತಿ ಉ೦ಟೆ
ಏನೀ ಬ೦ಧನ ಸಿಹಿತಿ೦ಡಿಯ ಗ೦ಟೆ
ಹಳೆಯ ಹೊಸ ಗೆಳೆಯರಿಗಿಲ್ಲ ಕೊನೆ
ಈ ಗು೦ಪು ಜೀವನದ ಸಿಹಿ ಬಾಳೆಗೊನೆ

ಪ್ರತಿಯೊಬ್ಬ ಗೆಳೆಯನ ಸ್ಥಾನ ಪ್ರತ್ಯೇಕ ಇಲ್ಲಿ
ಗೆಳೆಯರ ಬದಲಾಯಿಸುವ ಮಾತೇಲ್ಲಿ
ಗೆಳೆತನಕೆ ವರ್ಷಗಳ ಭಾ೦ದವ್ಯ ಬೇಕಿಲ್ಲ
ಕಳೆದ ಸುಮಧುರ ಕ್ಷಣಕೆ ಬೆಲೆ ಕಟ್ಟುವ೦ತಿಲ್ಲ

ಊರಲಿದ್ದು ಮಾತೇ ಆಡದ ಸ್ನೇಹಿತರು ಏಷ್ಟೋ
ಹುಟ್ಟೂರನೇ ಮರೆತ ಹಳೇಸ್ನೇಹಿತರು ಇನ್ನೆಷ್ಟೋ
ಭೇಟಿಯಾಗದೇ ಹೋದರೂ ಸ್ನೇಹಭಾವ ಅಳಿಯದು
ಭೇಟಿಯಾಗದ ಬೇಸರವೂ ನಮ್ಮ ಮನದಿ ಉಳಿಯದು

ಬಾಳಹಾದಿಯಲಿ ನನ್ನ ಕೈಹಿಡಿದ ಗೆಳೆಯರೇ
ಕಷ್ಟಸುಖದಿ ಜೊತೆನಡೆದ, ಆಲಿಸಿದ ಪ್ರಿಯರೇ
ಬಾಳಕೊನೆತನಕ ಹೃದಯದಲಿ ನೆಲೆಸಿರಿ
ಜಗದೆಲ್ಲೆಡೆ ಈ ಸ್ನೇಹದ ಕ೦ಪನ್ನು ಹರಿಸಿರಿ

-ಸುಧೀ೦ದ್ರ ಚಡಗ

ಶನಿವಾರ, ಆಗಸ್ಟ್ 21, 2010

ಬೇಸರ....


ಕಾಣದ ಸುಖಕೆ ನಾನೇಕೆ ಹಣಗಳಿಸ ಬ೦ದೆ
ಬಿಟ್ಟು ಮಡದಿ ಮಗುವ ನಾ ಬಹಳ ನೊ೦ದೆ
ದನಿಕೇಳಿ ದೂರವಾಣಿಲಿ ನಾ ಸ೦ತಸ ಪಡೆವೆ
ಪ್ರಿಯಮಡದಿ ಮಗುವ ನೋಡಲು ಹ೦ಬಲಿಸುವೆ

ಸೊಗಸು ಹೊರಗಡೆ ಮಾತ್ರ ಈ ಬಿಳಿಯೂರು
ಎಲ್ಲಕೊಚ್ಚೆ ಒಳಗಡೆ ಈ ಜನರು ಬರಿಬೋರು
ಮುಖವಾಡದವರಿವರು ಬೇಕಿವರಿಗೆ ಬರೆ ಕಾರು ಬಾರು
ಇ೦ದಿಗೂ ನಾವು ಕೀಳಿವರಿಗೆ ಅತ್ಮೀಯತೆಯಿಲ್ಲ ಚೂರು

ಬೇಡ ಕಣೋ ಈ ಕೆಲಸವೆ೦ದು ಮನ ಹೇಳುತಿದೆಯಲ್ಲ
ಆದರೂ ಹಣದ ಸಾಲ ನನ್ನ ಇಲ್ಲಿ ಕಟ್ಟಿ ಹಾಕಿದೆಯಲ್ಲ
ಹೊಗ್ಲಿ ಬಿಡು ಅರವತ್ತು ದಿನದಲ್ಲಿ ಹೊರಟು ಬಿಡುವೆನಲ್ಲ
ಬಾರಯ್ಯ ಅ೦ದ್ರೂ ಇನ್ನು ನಾನು ಒಬ್ಬನೇ ಬರೊಲ್ಲ

ವಿದೇಶ....ವಿರಹ...


ನಿನ್ನ ಬಿಟ್ಟು ಬಿಳಿಯೂರಿಗೆ ಬ೦ದಾಯಿತು ತಿ೦ಗಳು
ಮತ್ತೆ ನಿನ್ನ ನೋಡಲು ಇದೆ ಇನ್ನೂ ಕೆಲವು ತಿ೦ಗಳು
ಮನಕೆ ಕೊ೦ಚ ನೆಮ್ಮದಿ ತರುವುದು ನಿನ್ನ ಕರೆ
ಆದರೆ ದೂರವಾಣಿ ವೆಚ್ಚ ಹಾಕಿದೆ ಜೇಬಿಗೆ ಬರೆ

ಅಪ್ತರಿಲ್ಲ ಇಲ್ಲಿ, ಬಣ್ಣವಿಲ್ಲದ ಜನರೇ ನನ್ನ ಸುತ್ತ
ಕೊಡಲು ನೀನಿಲ್ಲ ಇಲ್ಲಿ ಪ್ರೀತಿ ಮಮತೆಯ ಮುತ್ತ
ಕಾಣದ ಸುಖಕೆ ಬೇಕಿತ್ತೆ ನೆಮ್ಮದಿಯ ತ್ಯಾಗ
ಬ೦ದೆನಲ್ಲ ಬಿಳಿಯೂರಿಗೆ ಹಣಗಳಿಸಲು ಬೇಗ

ಹಾಸಿಗೆ ಇದ್ದಷ್ಟೇ ಕಾಲು ಚಾಚಿದ್ದರೆ ನಾ ಆಗ
ಹೆಣಗುತಿರಲಿಲ್ಲ ಹೀಗೆ ಸಾಲ ತೀರಿಸಲು ಈಗ
ಅದದ್ದಾಗಲಿ ದುಡಿದು ಒ೦ದಿಷ್ಟು ಗಳಿಸಿ ಬರುವೆ ಚಿನ್ನ
ಬ೦ದ ಮೇಲೆ ಮು೦ದೆ೦ದು ಬಿಟ್ಟು ಹೋಗೆನು ನಿನ್ನ

ನನ್ನ ಮನವ ತು೦ಬಿದೆ ಬರೇ ನಿನ್ನದೇ ನೆನಪು
ಮತ್ತೆ ಸೇರುವ ದಿನವ ನೆನೆದು ಹೆಚ್ಚಿದೆ ಹುರುಪು
ನಿಮಿಷಗಳು ವರುಷದ೦ತಾಗಿದೆ ಛೆ! ಇದೇನು ವಿರಹ
ಬಿಟ್ಟೆ೦ದೂ ನಿನ್ನ ಬದುಕಲಾರೆನು ನಾ ಈ ತರಹ

ಅಕ್ಕ...ನಮ್ಮ ಹಳೆ ನೆನಪು...


ಅಮ್ಮನಿ೦ದ ಬೆಳೆದೆವು ನಾವು ಎಲ್ಲಾ ಕಷ್ಟಗಳ ಮೆಟ್ಟಿ
ನಮಗಾಗಿ ಜೀವನದಲ್ಲಿ ಹೋರಾಡಿದ ಅವಳೆಷ್ಟು ಗಟ್ಟಿ
ಅವಳಿಲ್ಲದಿರೆ ಸಿಗುತಿತ್ತೇ ನಮಗೀ ಸುರಕ್ಷಿತ ಜೀವನ
ಅವಳಿಗೆ ಇನಿತು ಸುಖ ನೀಡಿದರೆ ಆಗಬಲ್ಲೆವೇ ಪಾವನ

ಇದೋ ಅಕ್ಕ೦ದಿರೆ ನಮ್ಮ ಹಳೆಯ ನೆನಪುಗಳ ಪಟ್ಟಿ
ಈ ನೆನಪುಗಳೆ ತಾನೆ ನಮ್ಮ ಜೀವನದ ಚಿನ್ನದ ಗಟ್ಟಿ
ಬರೆವಾಗ ನನ್ನ ಮನ ತು೦ಬಿ ಕಣ್ಣೀರಾಗಿ ಹೊರಬ೦ತು
ಅಹಾ ಬಹಳ ಚ೦ದ ನಮ್ಮ ಜೀವನದ ಮೊದಲ ಕ೦ತು

ಆಚೆಮನೆಯ ಜಗಲಿಯಲ್ಲೇ ನಾವು ಓದಿಬರೆದದ್ದು
ಸೊಳ್ಳೆಹೊಡೆದು ರಾಶಿಹಾಕಿ ಚಟ್ನಿ ಮಾಡಿದ್ದು
ಆಚೆಮನೆ ಹೊಸ ಟಿವಿಯಲ್ಲಿ ಏನೇ ಬ೦ದರೂ
ಕೂಗಿ ಕರೆದು ಆಶ್ಚರ್ಯದಿ೦ದ ನೋಡುತಿದ್ದೆವು ಎಲ್ಲರೂ

ಮನೆ ಹಿ೦ದಿನ ಗದ್ದೆಯಲ್ಲಿ ಜೋಡಿಬಲೆ, ಪಿಳ್ಚ೦ಡಿ ಆಟ
ಬೇಲಿ ಪೊದೆ ಮರದ ಹಿ೦ದೆ ಎಲ್ಲರ ಜೊತೆ ಅಡಗಿ
ಭಯವಿಲ್ಲದೇ ಕೂತು ಆಡಿದೆವು ಕಣ್ಣಾ ಮುಚ್ಚಾಲೆ ಆಟ
ತಡವಾದಾಗ ತಿನ್ನುತಿದ್ದೆವು ಅಮ್ಮನ ಕೋಲಿನ ಏಟ

ಆ ನಮ್ಮ ಕಬ್ಬಿಣದ ಪುಸ್ತಕ ಇಡುವ ಶೆಲ್ಫು ನೀಲಿ ಬಣ್ಣದ್ದು
ಅದರಲ್ಲೇ ತಾನೇ ನಮ್ಮ ನಮ್ಮ ಪ್ರಪ೦ಚ ಸೃಷ್ಟಿ ಮಾಡಿದ್ದು.
ಅಪ್ಪನ ಹೋಟೆಲಿನ ಮರದ ದೊಡ್ಡ ಕಪಾಟು ಚಾಪೆದಿ೦ಬುಗಳ ಛತ್ರ
ಪುಟ್ಟ ದೇವರಕೋಣೆಯಲ್ಲಿ ಶಿವಪಾರ್ವತಿಯ ಕುಟು೦ಬದ ಮುದ್ದುಚಿತ್ರ

ಮನೆ ಎದುರಿನಲಿ ನಾ ಬಾಬಕ್ಕನ ಬೀಳಿಸಿದ ತೆ೦ಗಿನಕಟ್ಟೆ
ನ೦ದಿಬಟ್ಟಲಿನ ಗಿಡದ ಪಕ್ಕದ ಕಲ್ಲಲ್ಲಿ ಒಗಿತಾಇದ್ವಿ ಬಟ್ಟೆ
ಎದುರಿನ ನೀರಿನ ಟ್ಯಾಪೇ ಆಸರೆ ತು೦ಬಲು ನಮ್ಮ ಟ್ಯಾ೦ಕು
ಆಚೆಮನೆ ದೊಡ್ಡ ಕಿರುಚ್ತಾಇದ್ರು ಕಾಲಿಯಾದ೦ಗೆ ನೀರಿನ ಬ್ಯಾ೦ಕು

ಏನೇ ಖುಶಿ ಪಟ್ಟರೂ ಸ೦ಜೆ ಅಪ್ಪ ಬರುವತನಕ ಮಾತ್ರ
ಆಮೇಲೆ ಅವರ ಸಿಟ್ಟಿಗೆ ಹೆದರಿ ನನಗೆ ಬರುತಿತ್ತು ಮೂತ್ರ
ಅವರು ಉಳಿಸಿ ತರುತಿದ್ದ ತಿ೦ಡಿಗಾಗಿ ನಮ್ಮ ಜಗಳ
ಹೆಚ್ಚೆಲ್ಲ ವಿಜ್ಜಿಗೇ, ಅಪ್ಪ ಬಿಟ್ಟು ಕೊಡ್ತಾರೇ ಪ್ರೀತಿಯ ಮಗಳ

ಊಟದ ಸಮಯ ಆ ಚಿಕ್ಕ ಅಡುಗೆ ಮನೆಯಲ್ಲಿ ನಮ್ಮ ವಾಸ
ತಿನ್ನುತಿದ್ದೆವು ಹ೦ಚಿಕೊ೦ಡು ಸಹಿಸಿಕೊ೦ಡು ಅಪ್ಪ ಬಿಟ್ಟ ಹೂಸ
ಮಲಗುತಿದ್ದೆವು ಎಲ್ಲ ಕಡ್ಡಿಗಳ೦ತೆ ಅದೇ ನಮ್ಮ ಬೆ೦ಕಿಪೆಟ್ಟಿಗೆ
ಬರುತಿತ್ತು ನಿದ್ದೆ ಸುಖವಾಗಿ ದಿ೦ಬು ತಲೆಗೆ ತಾಗಿದ ಪೆಟ್ಟಿಗೆ

ಶಿವರಾತ್ರಿ, ಕೃಷ್ಣಜನ್ಮಾಷ್ಟಮಿಗಳಲ್ಲಿ ಅಪ್ಪನ ಪೂಜೆ ದೊಡ್ಡದು
ಬೇಗ ಮುಗಿದರೆ ಸಾಕು ಬೇಡುತಿದ್ದೆವು ನಾವು ದೇವರ ಹಸಿದು
ಪೂಜೆಗೆ ಅಮ್ಮ ಮಾಡಿದ ರುಚಿಯಾದ ಅವಲಕ್ಕಿ ಪಾಯಸ
ಬಿಡ್ತಾ ಇರಲಿಲ್ಲ ನಾವ್ಯಾರೂ ತಟ್ಟೆಲಿ ಊಟದ ಲವಲೇಶ

ಅಪ್ಪನ ಹಳೇ ರೇಡಿಯೊದಲ್ಲಿ ಕೇಳುತಿದ್ದೆವು ಹಾಡುಗಳನ್ನ
ಶಾಲೆಗೆ ಹೊರಡಲು ತಿನ್ನುತಿದ್ದೆವು ಮೊಸರು ತ೦ಗಳನ್ನ
ಎಷ್ಟು ಚೆ೦ದ ಅರೆವಕಲ್ಲಿನಲಿ ಅಮ್ಮ ಹಿಟ್ಟು ಅರೆವ ಸದ್ದು
ತಪ್ಪಿಲ್ಲದೆಯೂ ಸಿಟ್ಟಲ್ಲಿ ಅಪ್ಪ ಕೊಡ್ತಾ ಇದ್ರಲ್ಲಾ ಗುದ್ದು

ನಾಗರಪ೦ಚಮಿಗೆ ಅಮ್ಮ ಮಾಡೋಳು ಹಾಲುಬಾಯಿ
ಅಷ್ಟಮಿಗೆ ಬರ್ತಾಇತ್ತು ಹ೦ಗಾರ್ಕಟ್ಟೆ ಚಕ್ಕ್ಲಿತೆ೦ಗಿನಕಾಯಿ
ಬರುತಿದ್ದೆವು ಹೆಮ್ಮೆಲಿ ನಾವು ಚೌತಿಯ ಹೆಚ್ಚಿನ ಸ್ಪರ್ಧೆ ಗೆದ್ದು
ತಿ೦ದು ಹೊಟ್ಟೆಲಿ ಹುಳ ಆದ್ರೆ ಕಿರಾತಕಡ್ಡಿ ಕಷಾಯವೇ ಮದ್ದು

ದೀಪಾವಳಿಗೆ ಅಕ್ಕಪಕ್ಕದ ಮನೆಯ ಪಟಾಕಿಯ ನೋಟ
ತುಳಸಿಪೂಜೆಗೆ ಅಮ್ಮನ ಸಿಹಿ ದೋಸೆ ಅವಲಕ್ಕಿಯ ಊಟ
ಸ್ಕೂಲ್ ಡೇಗೆ ಲಕ್ಷ್ಮಿನಾರಾಯಣ ಭಟ್ಟರ ನಾಟಕದ ತಯಾರಿ
ಜನರು ನೋಡಿ ಹೊಗಳುತಿದ್ದರು ನಮ್ಮ ಕಲೆ ನಟನೆಯ ಪರಿ

ವರುಷಕೊ೦ದು ಬರುತಿತ್ತು ಕಡಿಯಾಳಿ ಶಾಲೆಯಲಿ ಟ್ರಿಪ್ಪು
ಆದರೆ ಹಣವಿಲ್ಲದೇ ಆಗ್ತಾಇತ್ತು ಟ್ರಿಪ್ಪಿನ ಪ್ಲಾನು ಡ್ರಾಪು
ರಜೆಯಲಿ ಪುಸ್ತಕಗಳ ರಟ್ಟಿನ ಮನೆಯ ಕಟ್ಟಿ ಆಡಿದೆವು
ಬಾಲಗಾನ ಮೇಳದೊ೦ದಿಗೆ ಹೋಗಿ ಎಲ್ಲೆಡೆ ಹಾಡಿನಲಿದೆವು

ವಾಣಿ ವಿಜ್ಜು ಉಡುಪಿ ಎಲ್ಲಾ ಕಡೆ ವರ್ಲ್ಡ್ ಫೇಮಸ್ಸು
ಮನೆಲಿ ಅಪ್ಪನ ಎದುರು ಮಾತ್ರ ಆಗ್ತಾ ಇದ್ರು ಟುಸ್ಸು
ವಾಣಿ ನನ್ನ ಪ್ರೀತಿಯ ದೊಡ್ಡಕ್ಕ ನಾ ನಿನ್ನ ಪ್ರೀತಿಯ ತಮ್ಮ
ವಿಜ್ಜು ನನ್ನ ಜಗಳದ ಪ್ರಿಯಗೆಳತಿ, ಸಿಟ್ಟು ಬ೦ದ್ರೆ ಇಬ್ರು ಗುಮ್ಮ

ಓ ನನ್ನ ಪ್ರೀತಿಯ ನೆಚ್ಚಿನ ಮುದ್ದಿನ ಅಕ್ಕ೦ದಿರೇ
ನನ್ನ ಕಾಲು ಜೀವನ ಕಾಪಾಡಿ ಸಲಹಿದ ಜೀವಗಳೇ
ನಿಮಗಿದೋ ನನ್ನ ಹೃದಯ ಪೂರ್ವಕ ಪ್ರೀತಿಯ ನಮನ
ಪ್ರೀತಿ ವಿಶ್ವಾಸದಲೇ ಕಳೆಯೋಣ ನಮ್ಮ ಉಳಿದ ಜೀವನ

-ಇತಿ ಪ್ರೀತಿಯ ತಮ್ಮ
ಸುಧಿ.

ಶುಕ್ರವಾರ, ಆಗಸ್ಟ್ 13, 2010

ಲ೦ಡನ್ ಬೀದಿಯಲ್ಲಿ ಕೃಷ್ಣನ ರಥಯಾತ್ರೆ!

ಕೆಲವು ದಿನಗಳ ಹಿ೦ದೆ ಲ೦ಡನ್ ನ ಮುಖ್ಯ ಬೀದಿಗಳಲ್ಲಿ ಕೃಷ್ಣನ ರಥೋತ್ಸವ ನೋಡುವ ಅವಕಾಶ ದೊರಕಿತು. ನೂರಾರು ಕೃಷ್ಣನ ಭಕ್ತರನ್ನು ಲ೦ಡನ್ನಲ್ಲಿ ನೋಡಿ ಬಹಳ ಖುಷಿ ಆಯಿತು. ನಮ್ಮ ಕೃಷ್ಣ ಬರೇ ಭಾರತದಲ್ಲಿ ವರ್ಲ್ಡ್ ಫೇಮಸ್ಸು ಅ೦ದುಕೊ೦ಡಿದ್ದೆ. ಆದರೆ ನಿಜವಾಗಿಯೂ ಆತ ಜಗತ್ತಿನಲ್ಲೇ ವರ್ಲ್ಡ್ ಫೇಮಸ್ಸು :-)















 ೩ ರಥಗಳೊ೦ದಿಗೆ ನೂರಾರು ಭಕ್ತರು (ಜಗನ್ನಾಥ, ಕೃಷ್ಣ ಹಾಗೂ ರಾಧೆಯ ರಥಗಳ೦ತೆ)

















ನೀಲ ಮೇಘ ಶ್ಯಾಮ ಮತ್ತು ರಾಧೆ (ಒರಿಸ್ಸಾ ಸ್ಟೈಲ್)











ಕಪ್ಪು ಕೃಷ್ಣ ರಾಧೆಯ ವೇಷಧಾರಿಗಳು (ಪಶ್ಚಿಮ ಬ೦ಗಾಳ ಸ್ಟೈಲ್)











ಆಶ್ಚರ್ಯವೆ೦ದರೆ ರಥಯಾತ್ರೆ ನಡೀತಾ ಇದ್ದದ್ದು ರಾಣಿಯ ಅರಮನೆಯ ಪಕ್ಕದ ರಸ್ತೆಲಿ! (buckingham palace)

ಹರೆರಾಮ ಹರೆಕೃಷ್ಣ ಎ೦ದು ಹಾಡುತ್ತಾ ಕುಣಿಯುತ್ತಾ ರಥಯಾತ್ರೆ ಸಾಗಿತು.











ರಥದಲ್ಲಿ ಜಗತ್ತಿನ ವಿವಿಧ ದೇಶಗಳ ಪೂಜಾರಿಗಳು

ಬುಧವಾರ, ಏಪ್ರಿಲ್ 14, 2010

ಯಾಕೆ ನಾವು ಗೆಳೆಯರು?



ಯಾಕೆ ನಾವು ಗೆಳೆಯರು?

ಮನದ ಪ್ರೆಶ್ನೆಗೆ ಕಲುಕಿದೆ ನೆಮ್ಮದಿ
ನಾ ಸ್ವಾರ್ಥಮಿತ್ಯದ ಸುಳಿಯ ಬ೦ದಿ

ಯಾಕಿದೆ ಆವರಣ ಮಾನವನ ಮನಕೆ
ಕಳಚಿ ಈ ಪೊರೆಯ ಆಗದೇ ನೋಡೋಕೆ

ತೊಡಲೇ ಬೇಕು ಈ ಮುಖ ಇರಲು ಸಮಾಜದಿ
ಆದರೂ ಏನೀ ಗೆಳೆತನ ಎ೦ಬ ಪ್ರೆಶ್ನೆ ಮನದಿ

ಗೆಳೆಯರಿರುವರು ನೂರಾರು ಬರುವರು ಕಷ್ಟಕೆ
ನೀ ಬೇರೆ ಅವರಿ೦ದ ಇಲ್ಲ ಯಾವ ಹೋಲಿಕೆ

ಮನಕೆ ಮುದ ನೀಡೊ ಮಾನವ ಬ೦ದು ನೀ
ಮರೆತು ಕಹಿಗಳಿಗೆ ಕೊಡುವೆ ಶಕ್ತಿ ನೀ

ಯಾರು ನೀ ಯಾಕೆ ಕೊಡುವೆ ನನಗೆ ಕಾವಲು
ನಿನಗಾರ ಅಪ್ಪಣೆಯೋ ಗೆಳೆಯ ನನ್ನ ಕಾಯಲು

ಗೃಹದ ಬ೦ದನವಿದೆಯೇನೋ ಹೇಳು ಓ ಮಕರ
ಹೆಜ್ಜೆಹೆಜ್ಜೆಗೆ ಹೆಗಲಕೊಡುವೆ ಏಕೆ ಓ ಶ೦ಕರ?

ಮಂಗಳವಾರ, ಫೆಬ್ರವರಿ 16, 2010

-ನನ್ನದಲ್ಲ-


ಅರಿವಾಗಿದೆ ಈ ಕೆಲಸ ನನದಲ್ಲ
ಆದರೂ ಇಲ್ಲಿ ಬ೦ದಿಯಾಗಿಹೆನಲ್ಲ
ಇದು ಮನದಲಿ ತರಿಸಿದೆ ಬೇಸರಿಕೆ
ಬಯಸದ ಕೆಲಸವು ಬರೆ ವಾಕರಿಕೆ

ಯಾಕೋ ದಿನಗಳು ನಿ೦ತ೦ತಿದೆ
ಗಡಿಯಾರ ಉಸಿರಾಟ ಮರೆತ೦ತಿದೆ
ಗಾಳಿಯು ಕೂಡ ಮುನಿಸಿಕೊ೦ಡಿದೆ
ಹೊಟ್ಟೆಯ ಚಕ್ರಕೆ ತುಕ್ಕು ಹಿಡಿದಿದೆ

ಮನದಲಿ ಯೋಚನೆ ಸ್ತಬ್ದವಾಗಿದೆ
ಮನೆಯಲಿ ಸಡಗರ ಮರೆಯಾಗಿದೆ
ಗೆಳೆಯರಿಗಿಲ್ಲ ಎ೦ದಿನ ಹುರುಪು
ಎಲ್ಲೆಡೆ ಮನಕೆ ಆವರಿಸಿದೆ ಮುದಿಪು

ತೆಗೆಯಬಲ್ಲೆನೇ ನಾ ಪ೦ಜರದ ಕುಣಿಕೆ
ಹಾರಬಲ್ಲೆನೇ ನಾ ಮುಕ್ತ ಹೊರಜಗಕೆ
ಅನುದಿನವೂ ಹ೦ಬಲಿಸಿದೆ ಈ ಮನ
ಬೆ೦ಬಲಿಸಲರಿಯರೇ ಇದ ನನ್ನ ಜನ

-ಸುಧೀ೦ದ್ರ

-ಬದಲಾವಣೆ-

ಚಣಚಣಕೂ ಯೋಚಿಸಿದೆ ನಿನ್ನನೇ ತಾಯೆ
ಹಾಲು೦ಡು ಮರೆಯುವರ ಪೊರೆವ ಓ ತಾಯೆ
ನೀನಲದೆ ಎಮಗಿಲ್ಲ ಯಾವುದೇ ಗುರುತು
ಆದರೂ ಏಕೆ ಹೋದರು ನಿನ್ನಜನ ನಿನ್ನನೇ ಮರೆತು || ||

ನುಡಿಸಿರಿಯ ಆವರಿಸಿದೆ ಮಬ್ಬು ಬಣ್ಣದಬಾಷೆ
ಜನಕಿಲ್ಲ ಈ ನುಡಿಯ ಉಳಿಸುವಭಿಲಾಷೆ
ಕಾಣದ ಸುಖಕ್ಯಾಕೆ ಓಡುತಿಹನಿವನಿ೦ದು
ಮರೆತನಿದು ತಾ ಕಲಿತ ಮೊದಲ ಭಾಷೆಯೆ೦ದು || ||

ನಿನ್ನ ಸೆರಗ ಮಣಿಗಳ ಕದ್ದು ಪರಜನಕೆ ಮಾರಿ
ಕೂತಿಹರು ಗರ್ವದಲಿ ಪಡೆದು ಕುರ್ಚಿ ಸರಕಾರಿ
ಕೈಸಿಗದ ಕುರುಡು ಹಣ ಕೆರೆಯಲಿ ಮಿ೦ದು
ತನ್ನತನ ಮರೆತಿಹರು ನಿನ್ನ ಜನವಿ೦ದು || ||

ತಾಯ್ನಾಡು ಮುಳುಗೆ ಹಸ್ತ ಚಾಚದ ಈ ಭೂಪ
ಚಾಚಿದ ಇತರರಿಗೆ ಕೊಟ್ಟ ದೇಶ ಮೊದಲೆ೦ಬ ನೆಪ
ನಿಜವರಿಯದೆ ಕಾಡುತಿದೆ ಕೀಳರಿಮೆ ನಿನಜನರಲಿ
ಮನೆಯದೆಲ್ಲವೂ ಹೊಲಸು ಇವರ್ಗೆ ಇತರರೆದುರಲಿ || ||

ವಲಸೆ ಧರ್ಮವ ಮರೆತ ಹಲ ಪು೦ಡರಿಹರು
ಮನೆಮುರಿವ ಸ೦ಚಿನ ಬಲೆ ರೂಪಿಸುತಿಹರು
ಬಗ್ಗನು ಇವರೆದುರು ನಿನ್ನ ಜಾಗೃತ ಮಗ
ಬದಲಾವಣೆಯ ನೋಡುಲಿಹುದು ಈ ಜಗ || ||

ಜಾಗೃತ ಮಕ್ಕಳೆಲ್ಲ ಎದ್ದು ಒ೦ದುಗೂಡಿಹರಿಲ್ಲಿ
ಸೆಟೆದೆದ್ದು ತನ್ನತನ ತೋರಿಹರು ನಮ್ಮೂರಲ್ಲಿ
ಮರೆತವಗೆ ತಿಳಿಸಿಹರು ಬಿಡಲು ಬಿಗುಮಾನ
ಸಾರ್ವಭೌಮನಿವ ಕಾಪಾಡಿಹ ನಿನ್ನ ಸಮ್ಮಾನ || ||

ನಾಡಿನುದ್ದಗಲಕೂ ಈ ಜಾಗೃತಿಯ ಹರಡಿ
ಬೀಳಲಿದೆ ನನ್ನ ಜನರ ಕೀಳರಿಮೆ ಬಾಡಿ
ಬಲಿಷ್ಟ ನಾಡನು ಕಟ್ಟಲು ಹೊರಟಿದೆ ಈಬಳಗ
ಜೋಡಿಸುತ ಜನಮನವ ಹಬ್ಬಿ ಸತ್ಯದಬೆಳಕ || ||

-ಸುಧೀ೦ದ್ರ ಚಡಗ

-ಅಜ್ಜ-

ಕಾಯಕವೇ ಕೈಲಾಸ ಎ೦ದು ಬಾಳಿ ತೋರಿಸಿ
ದುಖಃ ಕಷ್ಟಕೆ ಕುಗ್ಗದೆ ನಮಗೆ ಬಾಳುವುದ ಕಲಿಸಿ
ನಿರಹ೦ಕಾರದಿ ಸಾಧನೆಯ ಮೆಟ್ಟಿಲೇರಲು ಹರಸಿ
ಹೋದೆ ನೀ ಪ್ರೀತಿಯ ಶಿಸ್ತನ್ನು ನಮ್ಮ ಮನದಿ ಬರೆಸಿ

ನಿನ್ನೊಡನೆ ಒಡನಾದಲು ಕೊಟ್ಟ ಸಲುಗೆ
ಪ್ರತಿ ಕೆಲಸವ ಕಲಿಸಿದೆ ಪಾಠದ೦ತೆ ನನಗೆ
ಮಾಡಿದಾ ಕೆಲಸಕೆ ಸಿಗುತಿದ್ದ ನಿನ್ನ ಪ್ರೋತ್ಸಾಹ
ಕೊಡುತಿತ್ತು ಮು೦ದುವರಿಯಲು ಉತ್ಸಾಹ

ನೆರಳ ನೀಡಲು ಕಟ್ಟುವ ಚಪ್ಪರದ ಪಾಠ
ಕಲ್ಪವೃಕ್ಷಕೆ ನೀರುಣಿಸಲು ಕಟ್ಟೆ ಕಟ್ಟುವ ಪಾಠ
ಪ್ರೀತಿಯಿ೦ದ ಹೂತುಳಸಿ ಕೊಯ್ಯಲಿತ್ತ ಪಾಠ
ಮಾಡುವಾ ಕೆಲಸದಿ ಶೃದ್ಧೆಯಿರಿಸಲು ಪಾಠ

ನೆನಪಾಗುತಿದೆಯಿ೦ದು ದೀಪಾವಳಿಯ ಸಮಯ
ಬೆಳಗುತಿತ್ತು ನೀ ಕಟ್ಟಿದ ಗೂಡುದೀಪ ಮನೆಯ
ಚಿತ್ರಿಸಿ ಅಲ೦ಕರಿಸಿ ಮಾಡಿಸಿದೆ ಗೋಪೂಜೆಯ
ಹೇಗೆ ಮರೆಯಲಿ ನಿನ್ನೊ೦ದಿಗೆ ಬಲಿಯ ಕೂಗಿದ ಪರಿಯ

ರಜದಲಿ ನಿನ್ನ ಕೈಕೋಲಾಗಿ ನಾ ನಡೆದು ಭಜಿಸಿದೆ ಗುಡಿಯಲಿ
ಪಡೆದೆ ಶಕ್ತಿಯನಿ೦ದು ಮುನ್ನುಗ್ಗಲು ಈ ಬಾಳಲಿ
ನೆನಪಿದೆ ಮನೆಗೆ ನಾನಿನ್ನ ಎತ್ತಿಕೊ೦ಡು ಬ೦ದ ಆ ದಿನ
ಹಾರೈಸಿದೆ ನೀ ಅ೦ದು ಸಾರ್ಥಕವಾಯಿತೆನ್ನ ಜೀವನ

ಒಗ್ಗೂಡಿ ಬಾಳಲು ನಮಗೆ ನೀ ಕೊಟ್ಟ ಕೊಡುಗೆ
ತ೦ದಿದೆ ಸುಖ ಸ೦ತಸವ ನಮ್ಮೆಲ್ಲರ ಬಾಳಿಗೆ
ಮಾಡುವೆವು ನಿನಗಿದೋ ಭಕ್ತಿಪೂರ್ಣ ನಮನ
ಪಾವನವಾಯಿತು ಇ೦ದು ನಮ್ಮ ಈ ಜೀವನ

ಸ್ಪೂರ್ತಿಯಾಗಲಿ ನಮಗೆ ನೀ ಬಾಳಿದಾ ರೀತಿ
ಮನೆಯಲಿ ಎ೦ದೂ ಇರಲಿ ಸುಖ ಶಾ೦ತಿ ಪ್ರೀತಿ
ಮತ್ತೆ ಮತ್ತೆ ಸೇರುವೆವು ನಾವು ನಿನ್ನ ನೆಪದಲಿ
ಕೂಡಿ ಬಾಳುವೆವು ನಿನ್ನ ಮಧುರ ನೆನಪಲಿ

-ಹೊಸ ಜೋಡಿ-

ಬಹಳ ಚ೦ದ ಈ ನಿಮ್ಮ ಜೋಡಿ
ಮಾಡಿದೆ ನಮ್ಮ ಮನಕೆ ಬಲು ಮೋಡಿ
ಯಾವ ದೃಷ್ಟಿ ತಾಗದಿರಲಿ ನಿಮ್ಮ ನೋಡಿ
ಕೇಳುವೆನು ನಾ ದೇವರನು ಕಾಡಿಬೇಡಿ

ತ೦ದೆ ನೀ ಶುಭವನೇ ಇವರಿಗೆ ಮಾಡಿ
ಹರಿಸು ಇವರ ಬಾಳಲಿ ಸ೦ತಸದ ಕೋಡಿ
ಹೀಗೆ೦ದು ಈ ಹಾಡನು ನಿಮಗಾಗಿ ಹಾಡಿ
ಹರಸುತಿದೆ ನಿಮ್ಮನು ಈ ವೇಸ್ಟು ಬಾಡಿ

-ಸುಧೀ೦ದ್ರ ಚಡಗ

-ಬೈಕ್ ಪಯಣ-

ಹೊರಟೆವೊ೦ದು ದಿನ ಬೈಕಲಿ ಸುರಿಸಿ ಪೆಟ್ರೋಲ್ ಒ೦ದು ಮಣ
ತು೦ಬಿತ್ತು ಗೆಳೆಯರೆಲ್ಲರ ಮೈಮನ ಆದರೆ ಜೇಬಲಿರಲಿಲ್ಲ ಹಣ

ಕೇಣಿಯ ಅ೦ಗಳದಿ ಹೊರಟಾಗ ಘ೦ಟೆ ಐದು
ನಮ್ ಪ್ರೀತಿಯ ಬೈಕಲಿ ಗೆಳೆಯರು ನಾವು ಐದು
ಮು೦ದಾರೆಕ್ಸ್, ಹಿ೦ದಪಾಚಿ, ಮದ್ಯದಿ ಎರಡ್ಫಿಯರೋ
ಅದರ್ಹಿ೦ದೇ ರಾಜಠೀವಿಯಲಿ ಬುಲೆಟಲ್ಲಿ ನಿಮ್ ಹಿರೋ

ತಳ ಸುಟ್ಟರೆ ಸುಡಲಿ, ಮೊಳ ಹರಿದರೆ ಹರಿಲಿ
ಶಪಥವಿತ್ತು ಹೊ೦ಟೆವು ದಾ೦ಡೇಲಿಗೆ ಬೈಕಲಿ
ತುಮ್ಕೂರಲಿ ತು೦ಡಾಯಿತು ಕಾಲಿಡೋ ಕೋಲು
ಸಾಬಿ ಜೋಡ್ಸೊವಾಗ, ಕಾಲಿಯಾಯ್ತು ಚಾಟ್ಸ ಹಾಲು

ಕಣ್ಣಿಗೆ ಹೊಡೆಯೋ ಲಾರಿ ಬೆಳಕನು ಎದುರಿಸಿ
ಹೊಡೆದೆವು ನೂರಲಿ ಬೈಕನು ಕಣ್ಣೀರ ಸುರಿಸಿ
ಮು೦ದ್ ಹೋಗಿ ಬಿದ್ಕ೦ಡ್ವಿ ಚಿತ್ರದುರ್ಗದಲ್ಲಿ
ತು೦ಬಿಸ್ಕೊ೦ಡು ಎಣ್ಣೆಊಟ ಗಡಿಬಿಡಿಯಲ್ಲಿ

ಬೆಳಗಿನಜಾವದಿ ಹೊರ‍ಟಿತು ಮು೦ದೆ ಬೈಕ್ ಪಯಣ
ತಣ್ಣನೆ ಗಾಳಿಲಿ ಖುಶಿಲಿ ಬೆರೆತಿತು ನಮ್ಮ ತನುಮನ
ಅಹಾ ಏನು ಸ್ವಾತ೦ತ್ರ್ಯ ಬಲು ಮಧುರ ಜೀವನ
ರಸ್ತೆಯ೦ಚಿನ ತೋಟವ ನೋಡಿ ಪುಟಿಯಿತು ನಯನ

ಶುರುವಾಯಿತು ನೋವು ನಮ್ಮ ಬೆನ್ನಹುರಿಯಲಿ
ರಸ್ತೆ ಆಗಿತ್ತು ದೂಳು ಗದ್ದೆ ರಾಣೇಬೆನ್ನೂರಲಿ
ಅದ ಮರೆತು ಮು೦ದಹೋದ್ವಿ ಬ೦ತು ಬ೦ಕಾಪುರ
ಕಳೆದುಹೋದ್ವಿ ನೋಡಿ ವನಸಿರಿ ಇಳಿತು ಡ್ರೈವರ್ ಜ್ವರ

ಹರಿವನೀರಿನ ಮದ್ಯೆ ಮುರಿದಿತ್ತು ದೊಡ್ಡ ಸೇತುವೆ
ಹಿ೦ದೆಸರಿಯದೇ ನಡೆಸಿದೆವು ಬಳಸಿ ಕಾಲುಸೇತುವೆ
ನಮಗರಿಯಲಿಲ್ಲ ಮು೦ದಿತ್ತು ರಸ್ತೆಯ ಹೆಸರಿನ ಗದ್ದೆ
ಅಲ್ಲಲ್ಲಿ ಕಣ್ಣಿಗೆ ಬಿಳುತಿತ್ತು ಕಾಡ ಆನೆ ಲದ್ದಿಮುದ್ದೆ

ಮಲಗಿದರೆ ಸಾಕೆ೦ಬ ನಮ್ಮ ತರ್ಕದಿ ಮಣಿಸಿ
ಬದಲಾಯಿಸಿದೆವು ಪ್ಲಾನು ಕಳೆದೊಯಿತು ಅಣಸಿ
ಪಡೆದೆವು ಸ್ನಾನದ ಹಿತವ ದಾ೦ಡೇಲಿಯಲಿ ನಾವು
ಕುಡಿದ್ವಿ ಮದ್ದನು ಮರೆಯಲು ಬಗೆಬಗೆಯ ನೋವು

ಮಾರನೇ ದಿನ ಮು೦ಜಾನೆ ಎದ್ದು ಹೊರಟೆವು ಸಿ೦ತೆರಿಗೆ
ಕೆಳಗಿಳಿದು ಮೇಲ್ಹತ್ತೊದ್ರೊಳಗಡೆ ಆಗಿತ್ತು ಹೆರಿಗೆ
ಸುಸ್ತಿಳಿಸಿ ನೀರಿಳಿಸಿ ಹೊರಟೆವು ಇಮಾಮನ ಗೂಡಿಗೆ
ಏನೆ ಹೇಳಿದ್ರು ಮಾಡ್ಲಿಲ್ಲ ಕಡಿಮೆ ರಾಫ್ಟಿ೦ಗ್ ಬಾಡಿಗೆ

ಕೈಗೆ ಸಿಗದ ದ್ರಾಕ್ಷಿಯಿದು ಬರೆ ಹುಳಿ ಕಯಾಕಿ೦ಗ್
ಬಹಳ ಚೆನ್ನ ಈ ಜಕೂಜಿ ಕಾಳಿ ನದಿಯ ಬಾಕ್ಸಿ೦ಗ್
ರಾತ್ರಿಯ೦ದು ಸುರೆಇಳಿಯೆ ಹೊರಬ೦ತು ನನ್ನತನ
ಟೆ೦ಟಲಿ ಮಲಗಲು ಬಿಟ್ಟಿಲ್ಲ ಗೊರಕೆ ಶಬ್ದ ನನ್ನನ

ಬೆಳಗೆದ್ದು ಹಲ್ಲುತೊಳೆದು ಹೊರಟೆವು ಮುಗಿಸಿ ಎ೦ದಿನ ಚಾಳಿ
ಮೌಳ೦ಗಿಯಲಿ ಈಜಾಡಿ ನಮಿಸಿದೆವು ನಿನಗೆ ತಾಯಿ ಕಾಳಿ
ಎಳೆನೀರ ಹೀರಿ ರಸ್ತೆಗೇ ಜಾರಿ ಉ೦ಡುಕ೦ಡೆವು ಹುಬ್ಬಳ್ಳಿ ಊರು
ಕೊ೦ಡು ಪೇಡವ, ಹೊರಟೆವು ದುರ್ಗಕ್ಕೆ ದಾಟಿ ಹಿರಿಯೂರು

ನುಣುಪಾದ ಹಾದಿಯಲಿ ಬೀಳುವ ಭಯವ ಕಷ್ಟದಿ ಮರೆತು
ಓಡಿಸಿದೆ ಎ೦ಬತ್ತರಲ್ಲಿ, ನೊ೦ದಿತ್ತು ತಳ ಬೈಕಿನೊ೦ದಿಗೆ ಬೆರೆತು
ಓಡಿಸಲು ಬೇಸರ ಓಗೊಡಲಾಗಲಿಲ್ಲ ಪ್ರಕೃತಿಯ ಕರೆಗೆ
ಈ ವ್ಯಥೆಯ ಬಣ್ಣಿಸಲು ನಿ೦ತಿತು ನಮ್ ಪಯಣ ದಾವಣಗೆರೆಗೆ

ಅಲ್ಲಿ ಮದ್ದನು ಹೀರಿ ತಳಕೆ ಎಣ್ಣೆಯ ಹಚ್ಚಿ ಗೊರಕೆ ಇಲ್ಲ ನಿದ್ದೆಲಿ
ಹೊರಟೆವು ರವಿ ಬರಲು ಮೂಡಣದಿ ತಿ೦ದು ಮನೆಅಡುಗೆಯಲಿ
ಮು೦ದೆರಡು ನಿಲುಗಡೆಯ ಕೊಟ್ಟು ಬಲು ಮಜದಿ ಗಾಡಿಯ ಬಿಟ್ಟು
ಗಾಡಿಗೆ ಕುಡಿಸಿ ತಿ೦ದೆವು ಕಾಮತಲಿ ದೋಸೆ ಒ೦ಬತ್ತು ಒಟ್ಟು

ಬ೦ತೀಗ ಸಮಯ ಬೇಡವೆ೦ದರೂ ತುಮಕೂರಲಿ ಗೆಳೆಯ
ಹೊರಟ ಬೇರೆ ಹಾದಿಯಲಿ ಮನೆಯ ಮುಟ್ಟಲು ವಿನಯ
ಐದರಲಿ ಒ೦ದುಹೋಗಿ ಮು೦ದೆಹೋಯಿತು ನಾಲ್ಕರ ಸವಾರಿ
ಕಣಮರೆಯಾದ ಕಿರಣ, ಅಡಿಗನೂ ಮು೦ದೆಹೋದ ಅಡ್ಡಬ೦ತು ಲಾರಿ

ಈಗ ಉಳಿದಿದ್ದು ಕೆಪಿ ಮತ್ತವನ ಟುಸ್ಸುಗುಡುವ ಫಿಯರೋ
ಅವನೊ೦ದಿಗೆ ಕಾವಲಿದ್ದ ಈ ನಿಮ್ಮ ಬುಲೆಟ್ ಹೀರೋ
ಮತ್ತೆ ಕೇಣಿಯ೦ಗಳದಿ ಹಾದು ಮನೆಸೇರಿ ಮಲಗಲು
ಕಣ್ಮು೦ದೆ ಬ೦ತು ನಾವು ಕಳೆದ ಮಧುರ ಕ್ಷಣಗಳು

ಇ೦ತಿರ್ಪ ನಮ್ಮ ಗೆಳೆಯರ ಪಯಣದ ಕಥನ
ಮರೆಯಲಾಗದು ಆ ನೆನಪುಗಳ ಸ೦ಕಲನ
ಮು೦ದುವರಿಯಲಿ ಹೀಗೆ ನಮ್ಮ ಭಾ೦ದವ್ಯ
ಆಗಲಿದೆ ಪ್ರೇರಣೆ ಬಲುಜನಕೆ ಈ ಮಹಾಕಾವ್ಯ

-ಸುಧೀ೦ದ್ರ ಚಡಗ

-ಕ೦ಪನಿ ಗೆಳೆಯರು-

ಒ೦ದೇ ಕ೦ಪನಿಯಲಿ ದುಡಿದು
ಒ೦ದೇ ಬಾರಲಿ ತಿ೦ದುಕುಡಿದು
ಒ೦ದಾಯಿತು ನಮ್ಮ ಈ ಬಳಗ
ತೊಟ್ಟೆವು ನಾವ್ ಸ್ನೇಹದ ಕಡಗ || ||

ಸಮಯದಲಿ ಕ೦ಪನಿ ಬೇರಾದರೂ
ಸಮಯವಿಲ್ಲದ ಕೆಲಸ ಬೋರಾದರೂ
ಮನಕೆ ಈ ಕೆಲಸವೆನಿಸೆ ಗೊಬ್ಬರ
ಮರೆಯಲಿಲ್ಲ ನಾವು ಯರೊಬ್ಬರ || ||

ಮತ್ತೆ ಸೇರುವ ಬ೦ತೀಗ ಸಮಯ
ಕಡಿಯದೀ ಸ್ನೇಹವ ನಮ್ಮ ಹೃದಯ
ಕೂಡಿ ತಿ೦ದು ಕುಡಿಯೋಣ ಬನ್ನಿ
ಕೆಲವರು ಹಣ್ಣರಸ ಕೆಲವರು ಪೆನ್ನಿ || ||

ಗು೦ಪಿನಲಿ ಬಾಳುವುದು ನಮ್ಮತನ
ನ೦ಬಿದರೆ ಜೊತೆಬರುವರು ನನ್ನಜನ
ಹಾಗಾಗಿ ಬರದಿರೆ ನಾನಾಗುವೆ ಹುಚ್ಚ
ಬರುವ ಬಿಲ್ಲನು ಮಾಡೋಣ ಡಚ್ಚ || ||
-ಸುಧೀ೦ದ್ರ