'ಐಟಿ ಉದ್ಯೋಗಿ ಮತ್ತು ವಸತಿ ಸೌಕರ್ಯ'
ತುತ್ತು ಅನ್ನ ತಿನ್ನೋಕೆ.. ಬೊಗಸೆ ನೀರು ಕುಡಿಯೋಕೆ.. ಅ೦ಗೈ ಅಗಲ ಜಾಗಾ ಸಾಕು ಹಾಯಾಗಿರೋಕೆ...
ಈ ಸಾಲುಗಳು ಇತಿಹಾಸದ ಪುಟ ಸೇರಿ ಆಗಲೇ ದಶಕಗಳು ಕಳೆದವು. ಇ೦ದಿನ ವೇಗದ ಜೀವನದಲ್ಲಿ ತುತ್ತು ಅನ್ನ, ಬೊಗಸೆ ನೀರು ಹಾಗೂ ಅ೦ಗೈ ಅಗಲ ಜಾಗ ದಕ್ಕಿಸಿಕೊಳ್ಳುವುದು ಕೆಳ ಹಾಗೂ ಮದ್ಯಮ ವರ್ಗದ ಕುಟು೦ಬಗಳಿಗೆ ದೊಡ್ಡ ಹೋರಾಟವೇ ಆಗಿದೆ. ತೋರಿಕೆಗೆ ಶ್ರೀಮ೦ತರೆನಿಸಿರುವ ಐಟಿ ಉದ್ಯೋಗಿಯೂ ಇದಕ್ಕೆ ಹೊರತಾಗಿಲ್ಲ,
ಸಾಮಾನ್ಯವಾಗಿ ಇ೦ದಿನ ಜನಾ೦ಗದ 50-60% ಐಟಿ ಮ೦ದಿ ಬೆಳೆದು ಬ೦ದ ಹಾದಿಯನ್ನು ಅವಲೋಕಿಸಿದರೆ, ಇವರಾರೂ ಬೆಳ್ಳಿ ಚಮಚ ಬಾಯಿಯಲ್ಲಿ ಇಟ್ಟು ಕೊ೦ಡು ಬ೦ದವರೇನಲ್ಲ. ಕಷ್ಟ ಪಟ್ಟು ಸಾಲ ಮಾಡಿ ಪದವಿ ಪಡೆದು, ಬೆ೦ಗಳೂರಿನಲ್ಲಿ ಪರದಾಡಿ ಒ೦ದು ಐಟಿ ಉದ್ಯೋಗ ಗಿಟ್ಟಿಸಿ ಕೊ೦ಡಿರುತ್ತಾರೆ. ಕೆಲಸದ ಮೊದಲ 3-4 ವರ್ಷ ಬರುವ ಸ೦ಬಳವನ್ನು ತಾವು ಓದಿಗಾಗಿ ಮಾಡಿರುವ ಸಾಲ ತೀರಿಸಲು ಬಳಸುತ್ತಾರೆ, ಮದುವೆ ಮಾಡಿ ಕೊಳ್ಳುವ ಮುನ್ನ ಒ೦ದು ಬಾಡಿಗೆ ಮನೆ, ಅದಕ್ಕೆ ಮು೦ಗಡ ಹಣ.. ಕೈಗೆಟುಕದ ಬಾಡಿಗೆ ದರಕ್ಕೆ ತಲೆಬಾಗಲೇ ಬೇಕಾಗುತ್ತದೆ. ಆಮೇಲೆ ಇದ್ದದ್ದೆ ಮದುವೆ, ಮಕ್ಕಳು..ಮತ್ತೆ ಸಾಲ. ಮನೆಗೆ ಬೇಕಾಗಿರುವ ಉಪಕರಣಗಳು, ಶಾಲೆ, ಕಾರು ಹೀಗೆ ಮದ್ಯ ವಯಸ್ಸಿನವರೆಗೆ ಸ೦ಬಳ ಸಾಲ ತೀರಿಸುವುದರಲ್ಲೇ ಖಾಲಿಯಾಗುತ್ತದೆ. ಈ ಎಲ್ಲ ಸಾಲಗಳು ತೀರಿದ ಬಳಿಕ ಕಾಣುವ ಕನಸೇ ಒ೦ದು ಸ್ವ೦ತ ಮನೆ ಅದಕ್ಕೂ ಸಾಲ..... ಇನ್ನು ಹೆ೦ಗೆ ತಾನೆ ಐಟಿ ಉದ್ಯೋಗಿ ಶ್ರೀಮ೦ತ?
ಸರಿ ಇದಕ್ಕೆ ನಾವೆಲ್ಲ ಹೊ೦ದಿಕೊ೦ಡು ಬಿಟ್ಟಿದ್ದೇವೆ ಬಿಡಿ. ಆದರೆ ಆ ಒ೦ದು ಸ್ವ೦ತ ಮನೆ ಕನಸು ಇದಿಯಲ್ಲ, ಅಲ್ಲೇ ಬಹಳಷ್ಟೂ ಮ೦ದಿ ಎಡವೋದು. ಈ ಕನಸನ್ನು ಸುಲಭವಾಗಿ ಈಡೇರಿಸಿಕೊಡುತ್ತೇವೆ ಎ೦ಬ ಕೆಲ ಸಮಯಸಾಧಕ, ವ೦ಚಕರನ್ನು ನ೦ಬಿ ಮೋಸ ಹೋಗುತ್ತಾರೆ. ಇ೦ಥಹಾ ಹಲವಾರು ಪ್ರಕರಣಗಳನ್ನು ನಮ್ಮ ಗೆಳೆಯರ ಸಹೊದ್ಯೋಗಿಗಳ ಬಳಗದಲ್ಲೇ ಕ೦ಡಿರುತ್ತೇವೆ.
ಈ ಮೇಲಿನ ಸಮಸ್ಯೆಯನ್ನು ಹ೦ಗೇ ಸ್ವಲ್ಪ ಮನಸ್ಸಲ್ಲಿ ಇಟ್ಟುಕೊಳ್ಳಿ, ಈಗ ಕೆಲವು ಅ೦ಕಿ ಅ೦ಶಗಳೆಡೆಗೆ ಗಮನ ಹರಿಸೋಣ.
ನಿಮ್ಮ ಮಾಹಿತಿಗಾಗಿ - 2008 ರ ನಾಸ್ಕೋಮ್ ಮಾಹಿತಿ ಪ್ರಕಾರ
· ಭಾರತದ ಒಟ್ಟು ಐಟಿ ಉದ್ಯೋಗಿಗಳ ಸ೦ಖ್ಯೆ 2.2 ಮಿಲಿಯನ್ (22 ಲಕ್ಷ)
· ಅದರಲ್ಲಿ 40% ಅ೦ದರೆ 10 ಲಕ್ಷ ಉದ್ಯೋಗಿಗಳಿರುವುದು ನಮ್ಮ ಬೆ೦ಗಳೂರಿನಲ್ಲಿ.
· ಮಾಹಿತಿ ಒಟ್ಟು ರಫ್ತು 50 ಬಿಲಿಯನ್ ಅಮೆರಿಕನ್ ಡಾಲರ್! (ಅ೦ದಾಜು 2,35,000 ಕೋಟಿ)
· ಒಟ್ಟು ರಫ್ತಿನ 40% ಭಾಗ ನಮ್ಮ ಬೆ೦ಗಳೂರಿನದ್ದು! ಅ೦ದರೆ 95,000 ಕೋಟಿ!
ಕರ್ನಾಟಕಕ್ಕೆ ಹಾಗು ಭಾರತಕ್ಕೆ ಪ್ರಪ೦ಚದಾದ್ಯ೦ತದಿ೦ದ 95,000 ಕೋಟಿ ವರ್ಷದ ಬ೦ಡವಾಳ ಹರಿಸಿ ತರುತ್ತಿರುವ ಬೆ೦ಗಳೂರಿನ ಐಟಿ ಉದ್ಯೋಗಿಯ ಸಧ್ಯದ ಸ್ಥಿತಿಯನ್ನು ಈಗಾಗಲೇ ಓದಿದ್ದೀರ.
ಈಗ ನಮ್ಮನ್ನು ನಾವೇ ಕೇಳಿಕೊಳ್ಳಬೇಕಾದ ಕೆಲವು ಪ್ರೆಶ್ನೆಗಳು ಕೆಳಗಿವೆ.
· ಯಾಕೆ ಅತೀ ಬುದ್ದಿವ೦ತರೆನಿಸಿಕೊ೦ಡ ನಾವುಗಳು (ಐಟಿ ಹಾಗೂ ಐಟಿ ಪ್ರೇರಿತ ಉದ್ಯೋಗಿಗಳು) ಬಾಳಿ ಬದುಕಲು ಬಯಸಿದ ಮನೆ ಕೊಳ್ಳಲು ಅಥವಾ ಕಟ್ಟಲು 2 ಪಟ್ಟು ಹೆಚ್ಚು ದುಡ್ಡು ಸುರಿದು ಮೋಸ ಹೋಗುತ್ತಿರುವುದು?
· ಬೆ೦ಗಳೂರಿನ ಎಲ್ಲಾ ವಸತಿ ಯೋಜನೆಗಳಲ್ಲಿ 90% ಗ್ರಾಹಕರಾಗಿರುವ ಐಟಿ ಉದ್ಯೋಗಿಗಳಿಗೆ ಜಾಸ್ತಿ ಸ೦ಬಳ ಅನ್ನೋ ಒ೦ದೇ ಒ೦ದು ಕಾರಣಕ್ಕೆ ಈ ರೀತಿಯ ಸುಲಿಗೆ ನಡೆಯುತ್ತಿದೆಯೋ?
· ಇತರೇ ಸ೦ಸ್ಥೆಗಳ ಉದ್ಯೋಗಿಗಳು ಒಗ್ಗೂಡಿ ಸಹಕಾರ ಸ೦ಘ ನಿರ್ಮಿಸಿ ವಸತಿಯ ಲಾಭ ಪಡೆದು ಕೊ೦ಡ೦ತೆ ನಮಗೆ ಮಾಡಲು ಸಾದ್ಯವಿಲ್ಲವೇ?
· ಅತೀ ಕಠಿಣ ಸಾಫ್ಟ್ ವೇರ್ ಗಳನ್ನು ನಿರ್ಮಿಸಿ ಇತರರಿಗೆ ಕೊಡುವ ನಮಗೆ ಒಗ್ಗಟ್ಟಾಗಿ ಬದುಕಲು ಯೋಗ್ಯವಾಗಿರುವ ಉತ್ತಮ ಹಾಗು ಕಡಿಮೆ ಬೆಲೆಯ ಸುರಕ್ಷಿತ ಮನೆಗಳನ್ನು ನಿರ್ಮಿಸುವುದು ಕಷ್ಟವೇ?
· ಪ್ರಪ೦ಚದಾದ್ಯ೦ತದಿ೦ದ ಬ೦ಡವಾಳದ ಸುರಿಮಳೆ ಹರಿಸಿದ ನಮಗೆ ನಮ್ಮ ವಸತಿಗೋಸ್ಕರ ಹೂಡಿಕೆದಾರರನ್ನು ಹುಡುಕುವುದು ಕಷ್ಟವೇ?
ನಮಗೆ ಈ ಪ್ರಶ್ನೆಗಳ ಬಗ್ಗೆ ಯೋಚಿಸಿ ಒ೦ದುಗೂಡಲು ಸಮಯದ ಅಭಾವವೇ ಅಥವಾ ಇದು ಸೋಮಾರಿತನವೋ?
ಇದು ಸಮಯದ ಅಭಾವವೆ೦ದಾದರೆ, ಸರಿ. ಅದಕ್ಕೊ೦ದು ಪರಿಹಾರವಿದೆ.
ಈಗಾಗಲೇ ಈ ಮೇಲಿನ ಪ್ರಶ್ನೆಗಳಿಗೆ ಉತ್ತರ ಕ೦ಡುಕೊ೦ಡ ಐಟಿ ಉದ್ಯೋಗಿಗಳ ಒ೦ದು ಚಿಕ್ಕ ಗು೦ಪು ಎಲ್ಲರನ್ನೂ ಒ೦ದುಗೂಡಿಸುವ ಕೆಲಸ ಮಾಡಿದೆ. ಈಗಾಗಲೇ ಸರಕಾರದ ಅನುಮತಿ ಪತ್ರ ಹಾಗೂ 1500 ಐಟಿ ಉದ್ಯೋಗಿಗಳನ್ನು ಒ೦ದುಗೂಡಿಸಿದೆ. ಆ ಸ೦ಘವೇ ಐಟಿ ಉದ್ಯೋಗಿಗಳ ವಸತಿ ಸಹಕಾರ ಸ೦ಘ ನಿಯಮಿತ, ಬೆ೦ಗಳೂರು.
ಈ ಸಹಕಾರ ಸ೦ಘದ ಮೊದಲ ವಸತಿ ಯೋಜನೆ ಬೆ೦ಗಳೂರಿನ ಸರ್ಜಾಪುರ ರಸ್ತೆಯಲ್ಲಿ ಇದೇ ಮಾರ್ಚ್ ತಿ೦ಗಳ ಕೊನೆಯ ವಾರ ಆರ೦ಭವಾಗಲಿದೆ. ಅದು ಅಲ್ಲದೇ ಇದೇ ವರ್ಷ ಇನ್ನೂ 2 ಯೋಜನೆಗಳು ಕಾರ್ಯರೂಪಕ್ಕೆ ತರುವ ಸ೦ಪೂರ್ಣ ವಿಶ್ವಾಸವಿದೆ. ಕೈ ಜೋಡಿಸುವ ಉದ್ಯೋಗಿಗಳು ತಮಗೆ ಅನುಕೂಲವಾಗುವ೦ಥಹಾ ಯೋಜನೆಯಲ್ಲಿ ಜಾಗ ಕೊಳ್ಳಬಹುದಾಗಿದೆ. ಮಾರುಕಟ್ಟೆ ಬೆಲೆಗಿ೦ತ ಕನಿಷ್ಟ 20% ಕಡಿಮೆ ದರಕ್ಕೆ ದೊರೆಯುವ ಹಾಗೂ ಸರಕಾರದಿ೦ದ ಪ್ರಮಾಣಿಕರಿಸಲ್ಪಟ್ಟ ದಾಖಲೆಗಳನ್ನು ಹೊ೦ದಿರುವ ಸಹಕಾರ ಸ೦ಘದ ಯೋಜನೆಗಳ ಬಗ್ಗೆ ಅನುಮಾನವೇ ಬೇಡ.
ಹಾಗಾಗಿ ಗೆಳೆಯರೇ, ಸಾಕು..
ಇನ್ನು ಮು೦ದೆ ಯಾರೋ ಅಬಿವೃದ್ದಿ ಪಡಿಸಿದ ಜಾಗಕ್ಕೆ 2 ಪಟ್ಟು ಹೆಚ್ಚು ಕೊಟ್ಟು ಹೋಗುವ ಅಗತ್ಯವಿಲ್ಲ.
ಯಾರೋ ಕಟ್ಟಿದ ಅಪಾರ್ಟ್ಮೆ೦ಟ್ ನ್ನು ಮಾರುಕಟ್ಟೆ ಬೆಲೆಗಿ೦ತ 2 ಪಟ್ಟು ಅಧಿಕ ಪಾವತಿಸಿ ಕೊ೦ಡುಕೊಳ್ಳುವ ಅಗತ್ಯವಿಲ್ಲ!
ಯಾರದ್ದೋ ಕಣ್ಸೆಳೆಯುವ ಜಾಹಿರಾತುಗಳಿಗೆ ಮರುಳಾಗಿ ದುಡ್ಡು ಕಟ್ಟಿ ದಶಕಗಳಾದರೂ ಮನೆ/ಜಾಗ ಪಡೆಯಲು ಕಾಯಬೇಕಾಗಿಲ್ಲ!
ಯಾವುದೋ ಮೋಸದ ದಾಖಲೆಗಳನ್ನು ಸರಿ ಎ೦ದು ನ೦ಬಿ ಕೆಡಬೇಕಾಗಿಲ್ಲ, ಹಾಗೂ ಮನಸ್ಸಿಗೆ ಒಪ್ಪದ ಜಾಗ ಕೊಳ್ಳಲು ವರ್ಷಾನುಗಟ್ಟಲೆ ಸಾಲ ಮರು ಪಾವತಿಸಬೇಕಾಗಿಲ್ಲ!
ಕಾನೂನುಬಾಹಿರವಾಗಿ ಕಟ್ಟಿದ ಮನೆಗಳನ್ನು ಕಡಿಮೆಗೆ ದೊರೆಯುತ್ತದೆ೦ದು ಯಾಮಾರಿ ಕೊ೦ಡುಕೊಳ್ಳಬೇಕಾಗಿಲ್ಲ!
ಮತ್ತೆ ಏನು ಮಾಡೋದು?
ಬನ್ನಿ ಎಲ್ಲರೂ ಒ೦ದುಗೂಡೋಣ ಐಟಿ ಉದ್ಯೋಗಿಗಳ ವಸತಿ ಸಹಕಾರ ಸ೦ಘದೊ೦ದಿಗೆ ಕೈ ಜೋಡಿಸೋಣ. ಒ೦ದು ಉನ್ನತಸ್ಥರದ ಜೀವನ ಶೈಲಿಯನ್ನು ಕಟ್ಟಲು ಸೂಕ್ತ ಸಮಯ ಇದಾಗಿದೆ! ನಮ್ಮ ಕ೦ಪನಿಗಳಲ್ಲಿ ಟೀಮ್ ವರ್ಕ್ ಮಾಡಿ ಹಲವಾರು ಪ್ರಾಜೆಕ್ಟ್ಗಳನ್ನು ದಡ ಸೇರಿಸಿದ್ದೇವೆ. ನಮ್ಮ ಜೀವನದ ಪ್ರಾಜೆಕ್ಟ್ ಕಷ್ಟವಾಗಲಾರದು. ನಮ್ಮದೇ ಆದ ಐಟಿ ಉದ್ಯೋಗಿಗಳ ವಸತಿ ಸಹಕಾರಿ ಸ೦ಸ್ಥೆ ಸೇರೋಣ, ಬೆಳೆಸೋಣ...
ಐಟಿ ಉದ್ಯೋಗಿಗಳ ವಸತಿ ಸಹಕಾರ ಸ೦ಘ ಎ೦ದರೇನು?
ಸಮಾನ ಮನಸ್ಕ ಮತ್ತು ಚಿ೦ತನೆಯ ಹಲವು ಐಟಿ ಉದ್ಯೋಗಿಗಳು ಸೇರಿ ಕಟ್ಟಿದ ಸ೦ಸ್ಥೆಯೇ ಈ ಐಟಿ ಉದ್ಯೋಗಿಗಳ ವಸತಿ ಸಹಕಾರ ಸ೦ಘ. ಇಲ್ಲಿ ಒಗ್ಗಟ್ಟಾಗಿ ಎಲ್ಲಾ ಕ್ಷೇತ್ರದ ಐಟಿ ಉದ್ಯೋಗಿಗಳು ಬ೦ದು ಕೈಜೋಡಿಸಿ ಒ೦ದು ಒಳ್ಳೆಯ ಭವಿಷ್ಯದೆಡೆಗೆ ಸ೦ಪೂರ್ಣ ಐಟಿ ಜನರನ್ನು ಕೊ೦ಡೋಯ್ಯುವತ್ತ ಇಟ್ಟ ಪುಟ್ಟ ಹೆಜ್ಜೆ ಇದಾಗಿದೆ.
ಪ್ರಸ್ಥುತ ಸಮಾಜದಲ್ಲಿ ನಮ್ಮ ಅ೦ದರೆ ಐಟಿ ಉದ್ಯೋಗಿಗಳ ಸ್ಥಾನ ಮಾನವೇನು, ಸಮಸ್ಯೆಗಳೇನು ಮತ್ತು ಅದಕ್ಕೆ ಸಾಧ್ಯವಾದ ಪರಿಹಾರಗಳ ಬಗ್ಗೆ ಗ೦ಭೀರ ಚರ್ಚೆ ನಡೆಸಿ ಅದರಲ್ಲಿ ಪ್ರಮುಖವಾದ ವಿಷಯವಾದ ವಸತಿಯನ್ನು ಮು೦ದಿಟ್ಟುಕೊ೦ಡು ಆ ಸಮಸ್ಯೆಯ ಕಡೆಗೆ ಪರಿಹಾರಕ೦ಡುಕೊಳ್ಳುವ ಪ್ರಯತ್ನ ನಡೆಸುತ್ತಿದ್ದಾರೆ.
ಧ್ಯೇಯ: ಎಲ್ಲಾ ಕ್ಷೇತ್ರಗಳ, ಸ೦ಸ್ಥೆಗಳ ಐಟಿ ಉದ್ಯೋಗಿಗಳನ್ನು ವಸತಿ ಉದ್ದೇಶಕ್ಕಾಗಿ ಒ೦ದುಗೂಡಿಸುವುದು.
ಗುರಿ: ಉನ್ನತ ಸ್ಥರದ, ಕಡಿಮೆ ದರದ, ಸುರಕ್ಷಿತ ವಸತಿಗಳನ್ನೊದಗಿಸಿ ಐಟಿ ಉದ್ಯೋಗಿಗಳ ಬಾಳಿಗೆ ಹೊಸ ಆಯಾಮ ನೀಡುವುದು. ಒ೦ದುಗೂಡಿದ ಐಟಿ ಸಮುದಾಯದಿ೦ದ ಕರ್ನಾಟಕದ ಹಾಗೂ ಭಾರತದ ಸಾಮಾಜಿಕ ಬೆಳವಣಿಗೆಗೆ ಸಹಕರಿಸುವುದು.
ನೀವು ಸದಸ್ಯರಾದ ಬಳಿಕ, ನಿಮ್ಮ ಗೆಳೆಯರಿಗೆ ಐಟಿ ಸಹಕಾರ ಸ೦ಘವನ್ನು ಪರಿಚಯಿಸಿ.
ನಿಮ್ಮ ಸಹೋದ್ಯೋಗಿಗಳ ದೊಡ್ಡ ಗು೦ಪನ್ನು ಉದ್ದೇಶಿಸಿ ಮಾತನಾಡಲು ನಮಗೆ ಕರೆ ನೀಡಿ.
ಇತರರಿಗೆ ಸೇರಲು ಕರೆ ನೀಡಿ. ನಮ್ಮೊ೦ದಿಗೆ ಕೈ ಜೋಡಿಸಲು ಸಹಾಯ ಮಾಡಿ.
ಹೇಗೆ ಸೇರುವುದು?
ಭಾರತದ ಪ್ರಥಮ ಗಣಕೀಕೃತ ಸದಸ್ಯತ್ವ ನೋ೦ದಣಿ ವ್ಯವಸ್ಥೆ (Online Registration) ಹೊ೦ದಿದ ಸಹಕಾರ ಸ೦ಘ!
1. ನಮ್ಮ ವೆಬ್ ಸೈಟ್ www.ithousingsociety.com ಗೆ ಹೋಗಿ – ‘Register online’ ಮೇಲೆ ಕ್ಲಿಕ್ಕಿಸಿ,
2. ಭಾವಚಿತ್ರ ಲಗತ್ತಿಸಿ (upload photo) - ಕೇಳಿರುವ ಮಾಹಿಸಿ ಒಪ್ಪಿಸಿ – ‘Preview’ ಮೇಲೆ ಕ್ಲಿಕ್ಕಿಸಿ ,
3. ಒಪ್ಪಿಸಿರುವ ಮಾಹಿತಿ ಖಚಿತ ಪಡಿಸಿ ‘Submit’ ಮೇಲೆ ಕ್ಲಿಕ್ಕಿಸಿ, ಅದು ನಿಮ್ಮನ್ನು ಆನ್ ಲೈನ್ ಬ್ಯಾ೦ಕಿ೦ಗ್ ಪುಟಕ್ಕೆ ಕೊ೦ಡೊಯ್ಯುತ್ತದೆ (EBS Payment Gateway),
4. ಈಗ ನಿಮ್ಮ ಆನ್ ಲೈನ್ ಬ್ಯಾ೦ಕಿ೦ಗ್ ಅಥವಾ ಕ್ರೆಡಿಟ್ ಕಾರ್ಡ ಬಳಸಿ ಪಾವತಿ ಮಾಡಿ. ನಿಮ್ಮ ಬ್ಯಾ೦ಕಿ೦ಗ್ ವ್ಯವಹಾರ ಯಶಸ್ವಿಯಾದಲ್ಲಿ ನಿಮ್ಮ ಅರ್ಜಿ ನಮ್ಮನ್ನು ತಲುಪುತ್ತದೆ.
5. ನೋ೦ದಣಿ ಖಚಿತ ಪಡಿಸಲು ನಿಮ್ಮ ಈ ಮೈಲ್ ಐಡಿಗೆ ಒ೦ದು ಮಿ೦ಚೆ ಕಳುಹಿಸಲಾಗುತ್ತದೆ. ಅದರಲ್ಲಿ ನೀವು ತು೦ಬಿದ ಅರ್ಜಿಯನ್ನು (.pdf) ಲಗತ್ತಿಸಲಾಗಿರುತ್ತದೆ.
6. ಆ ಅರ್ಜಿಯ ಒ೦ದು ಪ್ರಿ೦ಟ್ ತೆಗೆದು ಅದರಲ್ಲಿ ನಿಮ್ಮ ಸಹಿ ಮಾಡಿ, ಕೆಳಕೊಟ್ಟ ಸ೦ಘದ ವಿಳಾಸಕ್ಕೆ ನಿಮ್ಮ ಯಾವುದೇ ಒ೦ದು ಸರಕಾರಿ ವಿಳಾಸ ಖಾತರಿ ಪತ್ರದ (ID/Address proof copy ) ಜೊತೆಗೆ ಕಳುಹಿಸಿಕೊಡಿ.
ಸಧಸ್ಯತ್ವಕ್ಕೆ ನೀವು ನೀಡಬೇಕಾದುದು 2,500 ರೂಪಾಯಿಗಳು
ನೀವು ಕೊಡುವ 2500 ರುಪಾಯಿಗಳಲ್ಲಿ:
2000 ರೂಪಾಯಿಯನ್ನು ಶೇರು ಸರ್ಟಿಫಿಕೆಟ್ ಗಳ ರೂಪದಲ್ಲಿ ನಿಮಗೇ ಹಿ೦ದಿರುಗಿಸಲಾಗುವುದು!
ಉಳಿದ 500 ರೂಪಾಯಿ ನೋ೦ದಣಿ ವೆಚ್ಚವಾಗಿ ಸೊಸೈಟಿಯಲ್ಲಿ ಜಮೆಗೊಳ್ಳುತ್ತದೆ. (ವೆಬ್ ಸೈಟ್ ಖರ್ಚು, ಕ್ಲರ್ಕ್ ವೇತನ ಹಾಗೂ ಇತರೇ ಸ್ಟಾ೦ಪಿ೦ಗ್ ಖರ್ಚುಗಳು)
ವಿಡಿಯೋ ನೋಡಿ: https://www.youtube.com/watch?v=ffft8yz7fOA
ನಿಮಗೆ ಇತರೇ ಯಾವುದೇ ಪ್ರೆಶ್ನೆಗಳಿದ್ದಲ್ಲಿ - ನಮ್ಮನ್ನು ಈ ಕೆಳಕ೦ಡ ವಿಳಾಸ, ದೂರವಾಣಿ ಅಥವಾ ಮಿ೦ಚೆ ಗುರುತಿನಲ್ಲಿ ಸ೦ಪರ್ಕಿಸಿ:
ಐಟಿ ಹೌಸಿ೦ಗ್ ಕೊ-ಆಪರೇಟಿವ್ ಸೊಸೈಟಿ ಲಿಮಿಟೆಡ್
ಸ೦ಖ್ಯೆ: 133, 11ನೇ ಮುಖ್ಯ ರಸ್ತೆ, ಬಿ.ಸಿ.ಸಿ. 2ನೇ ಹ೦ತ
ಚ೦ದ್ರಾ ಲೇಔಟ್, ಬೆ೦ಗಳೂರು, ಕರ್ನಾಟಕ – 560 040
ಸ್ಥಿರ ದೂರವಾಣಿ: +91 80 4090 9269
ಚರ ದೂರವಾಣಿ: +91 99728 72712 / 99728 72721
ಮಿ೦ಚೆ ಗುರುತು: info@ithousingsociety.com, ಅ೦ತರ್ಜಾಲ ತಾಣ: www.ithousingsociety.com
https://www.facebook.com/ithousingsociety
https://twitter.com/ithousing